ರಾಷ್ಟ್ರೀಯ ರಾಜಧಾನಿಯಾದ ಕೆಂಪು ಕೋಟೆ ಆವರಣದಲ್ಲಿ ನಿಷ್ಕ್ರೀಯಗೊಳಿಸಿದ ಗ್ರೆನೇಡ್ ಪತ್ತೆಯಾಗಿದ್ದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮೂಲಗಳ ಪ್ರಕಾರ, ದೈನಂದಿನ ಕಾರ್ಯಾಚರಣೆಯ ಸಂದರ್ಭದಲ್ಲಿ ಗುರುವಾರ ಸಂಜೆ ಒಂದು ಬಾವಿಯಿಂದ ಗ್ರೆನೇಡ್ ಪತ್ತೆಯಾಗಿದ್ದರಿಂದ ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ಎಸ್ಜಿ) ಮತ್ತು ಡಿಸ್ಟ್ರಿಕ್ಟ್ ಕಮೀಶನರ್ ಆಫ್ ಪೋಲಿಸ್ (ಡಿಸಿಪಿ) ತಂಡವು ಸ್ಥಳವನ್ನು ತಲುಪಿ ಭಾರೀ ಹುಡುಕಾಟವನ್ನು ಪ್ರಾರಂಭಿಸಲಾಯಿತು.ಆದರೆ, ಯಾವುದೇ ಗ್ರೆನೇಡ್ ಪತ್ತೆಯಾಗಿಲ್ಲ ಎನ್ನಲಾಗಿದೆ.
ರಾಷ್ಟ್ರೀಯ ಭದ್ರತಾ ದಳದ ಯೋಧರು ಸುರಕ್ಷಿತವಾಗಿ ಗ್ರೆನೇಡ್ ತೆಗೆದು ಪರಿಶೀಲಿಸಿದಾಗ ಅದು ತುಂಬಾ ಹಳೆಯದಾಗಿದ್ದು, ಬಹುತೇಕ ವಿಶ್ವಯುದ್ಧದ ಕಾಲದ್ದಾಗಿರಬಹುದು ಎಂದು ಅಭಿಪ್ರಾಯಪಟ್ಟಿದೆ.
ಕಳೆದ ತಿಂಗಳ ಫೆಬ್ರವರಿ ತಿಂಗಳಲ್ಲಿ ಕೆಂಪುಕೋಟೆಯ ಒಳಗೆ ಸ್ವಚ್ಚಗೊಳಿಸುತ್ತಿರುವ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳಿದ್ದ ಬಾಕ್ಸ್‌ಗಳು ಪತ್ತೆಯಾಗಿದ್ದವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.