ನವದೆಹಲಿ: ಇನ್ನು ಮುಂದೆ ಹೋಟೆಲ್ ಗೆ ಹೋಗಿ ಬೇಕಾಬಿಟ್ಟಿ ಆಹಾರ ವೇಸ್ಟ್ ಮಾಡುವಂತಿಲ್ಲ. ನಿಮ್ಮ ಪ್ಲೇಟ್ ನಲ್ಲಿ ಎಷ್ಟು ತಿಂಡಿ ಇರಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸುತ್ತದೆ.
ಹೀಗೊಂದು ಹೊಸ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಎಷ್ಟೋ ಜನ ಹೋಟೆಲ್ ಗೆ ಹೋಗಿ ಅಗತ್ಯಕ್ಕಿಂತ ಹೆಚ್ಚು ಆಹಾರ ಹಾಕಿಸಿಕೊಂಡು ಪೋಲು ಮಾಡುತ್ತಾರೆ. ಇನ್ನೊಂದೆಡೆ ಎಷ್ಟೋ ಜನ ಬಡವರು ಹೊಟ್ಟೆಗೆ ಹಿಟ್ಟಿಲ್ಲದೆ, ಬವಣೆ ಪಡುತ್ತಾರೆ.
ಸಮಾಜದ ಈ ಅಸಮಾನತೆ ನೀಗಿಸುವಂತಹ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ನಾಲ್ಕು ಪೀಸ್ ಕಬಾಬ್ ತಿನ್ನುವ ವ್ಯಕ್ತಿಗೆ ಎಂಟು ಪೀಸ್ ಕಬಾಬ್ ನೀಡುವ ಅಗತ್ಯವಿಲ್ಲ. ಇದು ವೇಸ್ಟ್ ಎನ್ನುತ್ತಾರೆ ಸಚಿವರು.
ಕಳೆದ ತಿಂಗಳ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಆಹಾರ ಪೋಲಾಗುವ ಬಗ್ಗೆ ಮಾತನಾಡಿದ್ದರು. ಇದೀಗ ಕೇಂದ್ರ ಸಚಿವರು, ಇದನ್ನು ನಿಯಂತ್ರಿಸಲು ಕಾನೂನು ಏನಾದರೂ ತರಬಹುದೇ ಎಂದು ಕಾನೂನು ಸಚಿವಾಲಯದೊಂದಿಗೆ ಚಿಂತನೆ ನಡೆಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ