ಚೆನ್ನೈ: ತಮ್ಮ ನೇತೃತ್ವದಲ್ಲಿ ಸರಕಾರ ರಚನೆಗೆ ಹಕ್ಕು ಮಂಡಿಸಿ ಶಶಿಕಲಾ ನಟರಾಜನ್ ನೀಡಿದ್ದ ಬೆಂಬಲಿಗ 134 ಶಾಸಕರ ಸಹಿಯುಳ್ಳ ಪತ್ರವನ್ನು ದೃಢೀಕರಿಸಬೇಕಿದೆ ಎಂದು ರಾಜ್ಯಪಾಲ ವಿದ್ಯಾಸಾಗರ್ ಹೇಳಿದ್ದಾರೆಂದು ವರದಿಯಾಗಿದೆ.
ಬೆಂಬಲಿಗ ಶಾಸಕರ ಪಟ್ಟಿಯಿರುವ ಪತ್ರದಲ್ಲಿ ಎಲ್ಲಾ ಶಾಸಕರ ಸಹಿಯಿದೆ. ಆದರೆ ಇದು ಅಸಲಿಯೇ, ನಕಲಿಯೇ ಎಂದು ದೃಢೀಕರಣಪಡಿಸಬೇಕಿದೆ ಎಂದಿದ್ದಾರಂತೆ ರಾಜ್ಯಪಾಲರು. ಈಗಾಗಲೇ ಶಶಿಕಲಾ ಬಲವಂತವಾಗಿ ಶಾಸಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆಂಬ ದೂರು ಬಂದ ಹಿನ್ನಲೆಯಲ್ಲಿ ರಾಜ್ಯಪಾಲರು ಈ ಕ್ರಮ ಕೈಗೊಳ್ಳಲಿದ್ದಾರೆ.
ಶಶಿಕಲಾ ಖಾಲಿ ಪತ್ರಕ್ಕೆ ಶಾಸಕರಿಂದ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದರು ಎಂದು ಪನೀರ್ ಸೆಲ್ವಂ ಬೆಂಬಲಿಗರು ಆರೋಪಿಸಿದ್ದರು. ಪನೀರ್ ಸೆಲ್ವಂ ಎತ್ತಿದ ಅಪಸ್ವರಗಳನ್ನು ಪರಿಹರಿಸದೆ ತಮ್ಮನ್ನು ಸರ್ಕಾರ ರಚನೆಗೆ ಆಹ್ವಾನಿಸಲಾಗದು ಎಂದು ಶಶಿಕಲಾಗೆ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ