ಚೆನ್ನೈ: ತಮಿಳುನಾಡು ರಾಜಕೀಯ ಆಟದ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ. ನಿನ್ನೆ ಪನೀರ್ ಸೆಲ್ವಂ ಮತ್ತು ಶಶಿಕಲಾ ನಟರಾಜನ್ ಪ್ರತ್ಯೇಕವಾಗಿ ರಾಜ್ಯಪಾಲ ವಿದ್ಯಾಸಾಗರ್ ಅವರನ್ನು ಭೇಟಿಯಾಗಿದ್ದಾರೆ. ಹೀಗಾಗಿ ರಾಜ್ಯಪಾಲರ ನಿರ್ಧಾರದ ಬಗ್ಗೆ ಎಲ್ಲರ ದೃಷ್ಟಿ ನೆಟ್ಟಿದೆ.
ಇದೀಗ ರಾಷ್ಟ್ರಪತಿಗೆ ಎಲ್ಲಾ ವಿದ್ಯಮಾನಗಳ ವರದಿ ಸಲ್ಲಿಕೆಯಾಗಿದೆ. ಉಭಯ ಸಂಕಟದಲ್ಲಿರುವ ರಾಜ್ಯಪಾಲರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಲಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಶಶಿಕಲಾ ನಟರಾಜನ್ ಅವರ ಅಕ್ರಮ ಆಸ್ಥಿ ಪ್ರಕರಣ ಮತ್ತು ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿದ ತೀರ್ಮಾನ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ತೀರ್ಪು ಬರುವವರೆಗೂ ಕಾಯಬಹುದು ಎನ್ನಲಾಗಿದೆ.
ಪಕ್ಷ ಮತ್ತು ಶಾಸಕರನ್ನು ಅಕ್ರಮವಾಗಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಶಶಿಕಲಾ ಸಂಚು ರೂಪಿಸಿದ್ದಾರೆ ಎಂದು ಪನೀರ್ ಸೆಲ್ವಂ ದೂರು ನೀಡಿದ್ದಾರೆ. ಅಲ್ಲದೆ ಸೆಲ್ವಂ ಬಹುಮತ ಸಾಬೀತಿಗೆ ಐದು ದಿನಗಳ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ಶಶಿಕಲಾರಿಗಿಂತ ಮೊದಲು ಸೆಲ್ವಂಗೆ ಬಹುತಮ ಸಾಬೀತುಪಡಿಸಲು ರಾಜ್ಯಪಾಲರು ಅವಕಾಶ ನೀಡುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ