Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತೀಯ ಸೇನಾ ದಾಳಿ: ಸರ್ವಪಕ್ಷ ಸಭೆ ಕರೆದ ಪ್ರಧಾನಿ ಮೋದಿ ಸರಕಾರ

ಭಾರತೀಯ ಸೇನಾ ದಾಳಿ: ಸರ್ವಪಕ್ಷ ಸಭೆ ಕರೆದ ಪ್ರಧಾನಿ ಮೋದಿ ಸರಕಾರ
ನವದೆಹಲಿ , ಗುರುವಾರ, 29 ಸೆಪ್ಟಂಬರ್ 2016 (15:39 IST)
ಪಾಕ್ ಆಕ್ರಮಿತ ಕಾಶ್ಮಿರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ನಡೆದ ಸೀಮಿತ ದಾಳಿ ಕುರಿತಂತೆ ಚರ್ಚಿಸಲು ಕೇಂದ್ರ ಸರಕಾರ ಸರ್ವಪಕ್ಷಗಳ ಸಭೆ ಕರೆದಿದೆ ಎಂದು ಮೂಲಗಳು ತಿಳಿಸಿವೆ.
 
ಹಲವಾರು ಸಮಸ್ಯೆಗಳು, ಸವಾಲುಗಳನ್ನು ಭಾರತೀಯ ಸೇನೆ ಎದುರಿಸುತ್ತಿರುವುದರಿಂದ ಭಾರತೀಯ ಸೇನೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುತ್ತದೆ. ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಸರ್ವಪಕ್ಷಗಳ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡುವುದಾಗಿ ಕಾಂಗ್ರೆಸ್ ಪಕ್ಷದ ವಕ್ತಾರ ರಾಜ್ ಬಬ್ಬರ್ ತಿಳಿಸಿದ್ದಾರೆ.  
 
ಗಡಿಯೊಳಗೆ ನುಸುಳಲು ಗಡಿರೇಖೆಯ ಬಳಿ ಉಗ್ರರು ಅವಿತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಉಗ್ರರ ಬೆಂಬಲಿಗರು ಹತರಾಗಿದ್ದಾರೆ. ಭಾರತೀಯ ಸೇನಾ ಪಡೆಗಳಲ್ಲಿ ಯಾವುದೇ ಸಾವು-ನೋವು ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.
 
ಭಾರತದ ಗಡಿಯೊಳಗೆ ನುಸುಳುವ ಎಲ್ಲಾ ಉಗ್ರರನ್ನು ಹತ್ಯೆ ಮಾಡಲಾಗುವುದು ಭಾರತ ವಿರೋಧಿ ಕೃತ್ಯವನ್ನು ಸೇನೆ ಸಹಿಸುವುದಿಲ್ಲ. ಅಕ್ರಮ ನುಸುಳುವಿಕೆಯಂತಹ  ಘಟನೆಗಳು ನಡೆದರೆ ಖಂಡಿತಾ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಜಿಎಂಓ ರಣಬೀರ್ ಸಿಂಗ್ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನಾ ದಾಳಿ: ಕುಸಿದ ಶೇರುಪೇಟೆ ಸೂಚ್ಯಂಕ