ದೇಶದ ಎಂಟು ರಾಜ್ಯಗಳಲ್ಲಿ ಹಿಂದುಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿ ಬಿಜೆಪಿ ಮುಖಂಡರೊಬ್ಬರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.
ಎಂಟು ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿರುವುದರಿಂದ ಅವರಿಗೆ ಅಲ್ಪಸಂಖ್ಯಾತರಿಗೆ ದೊರೆಯುವ ಸರಕಾರಿ ಸೌಲಭ್ಯಗಳು ದೊರೆಯಬೇಕು ಅರ್ಜಿಯಲ್ಲಿ ತಿಳಿಸಿದ್ದಾರೆ.
ಕಳೆದ 2011ರ ಜನಗಣತಿ ಪ್ರಕಾರ, ಲಕ್ಷದ್ವೀಪ್(ಶೇ.2.5 ) ಮಿಜೋರಾಮ್(ಶೇ.2.75), ನಾಗಾಲ್ಯಾಂಡ್ (ಶೇ.8.75), ಮೇಘಾಲಯ(ಶೇ.11.53), ಜಮ್ಮು ಮತ್ತು ಕಾಶ್ಮಿರ(ಶೇ.28.44), ಅರುಣಾಚಲ ಪ್ರದೇಶ (ಶೇ.29.0), ಮಣಿಪುರ(ಶೇ.31.39) ಮತ್ತು ಪಂಜಾಬ್ (ಶೇ.38.40) ಹಿಂದುಗಳು ಅಲ್ಪಸಂಖ್ಯಾತರಿದ್ದಾರೆ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಎಂಟು ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತವಾಗಿದ್ದರೂ ಅಲ್ಪಸಂಖ್ಯಾತರಿಗೆ ದೊರೆಯಬೇಕಾದ ಸೌಲಭ್ಯಗಳು ದೊರೆತಿಲ್ಲ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ರಾಷ್ಟ್ರೀಯ ಅಲ್ಪಸಂಖ್ಯಾತ ಕಾಯ್ದೆಯನ್ನು ಉಲ್ಲಂಘಿಸಿವೆ. ಸಂವಿಧಾನದ ಅಲ್ಪಸಂಖ್ಯಾತ ಕಾಯ್ದೆಯನ್ನು ನಿರ್ಲಕ್ಷಿಸಿ ಹಿಂದುಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
\ದೆಹಲಿ ಬಿಜೆಪಿ ನಾಯಕ ಮತ್ತು ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದಾರೆ.
ಲಕ್ಷದ್ವೀಪ (96.20%) ಮತ್ತು ಜಮ್ಮು ಮತ್ತು ಕಾಶ್ಮೀರ (68.30%) ಮತ್ತು ಅಸ್ಸಾಂ (34.20%), ಪಶ್ಚಿಮ ಬಂಗಾಳ (27.5%), ಕೇರಳ (26.60%), ಉತ್ತರ ಪ್ರದೇಶ (19.30) %) ಮತ್ತು ಬಿಹಾರ್ (18%) ರಾಜ್ಯಗಳಲ್ಲಿ ಬಹುಸಂಖ್ಯಾತರಾಗಿದ್ದರೂ ಅವರು ಅಲ್ಪಸಂಖ್ಯಾತ ಸ್ಥಾನಮಾನವನ್ನು ಆನುಭವಿಸುತ್ತಿದ್ದಾರೆ. ನಿಜವಾದ ಅಲ್ಪಸಂಖ್ಯಾತರ ಸಮುದಾಯಗಳು ತಮ್ಮ ಕಾನೂನುಬದ್ಧ ಪಾಲನ್ನು ಪಡೆಯುತ್ತಿಲ್ಲ ಎಂದು ದೂರುದಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.