ರಾಷ್ಟ್ರ ರಾಜಧಾನಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಗುರುವಾರ ರಾತ್ರಿ ಸಹ ಚಲಿಸುವ ಕಾರೊಂದರಲ್ಲಿ ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು , ಆ ಕಾರ್ ಮೇಲೆ ಕೇಂದ್ರ ಗೃಹ ಸಚಿವಾಲಯದ ಪಾರ್ಕಿಂಗ್ ಸ್ಟಿಕರ್ ಇದೆ ಎಂಬ ಶಾಕಿಂಗ್ ಮಾಹಿತಿ ಸಿಕ್ಕಿದೆ.
ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಿಂದ ನೊಯ್ಡಾಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕಾರ್‌ನಲ್ಲಿ ಲಿಫ್ಟ್ ನೀಡುತ್ತೇನೆ. ನಿಮ್ಮ ಮನೆವರೆಗೆ ಬಿಡುತ್ತೇನೆ ಎಂದು ಕರೆದೊಯ್ದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯನ್ನು ಕೈಗೊಂಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಡಿಸೆಂಬರ್ 16 ರಂದು 23 ವರ್ಷದ ವಿದ್ಯಾರ್ಥಿಯ ಮೇಲೆ ಚಲಿಸುವ ಬಸ್ಸಿನಲ್ಲಿ 6 ಜನರು ನಡೆಸಿದ ಸಾಮೂಹಿಕ ಅತ್ಯಾಚಾರ ವಿಶ್ವದಾದ್ಯಂತ ಖಂಡನೆಗೆ ಒಳಗಾಗಿತ್ತು. ಆಕೆಯ ಸ್ನೇಹಿತನಿಗೆ ಥಳಿಸಿ, ಕೀಚಕ ಕೃತ್ಯವನ್ನು ನಡೆಸಲಾಗಿತ್ತು. ಬಳಿಕ ಆಕೆಯ ಗುಪ್ತಾಂಗದಲ್ಲಿ ಸಿಕ್ಕ ಸಿಕ್ಕಿದ್ದನ್ನೆಲ್ಲ ತೂರಿ ರಾಕ್ಷಸೀ ಕೃತ್ಯವನ್ನು ಮೆರೆದು ಇಬ್ಬರನ್ನು ಬಸ್‌ನಿಂದ ಹೊರಗೆ ದೂಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಡಿಸೆಂಬರ್ 29 ರಂದು ಸಿಂಗಾಪುರ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಬಳಿಕ ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ನಿರ್ಭಯ ಕಾನೂನನ್ನು ರೂಪಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ