ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ತಂದೆಯನ್ನು 14 ವರ್ಷದ ಬಾಲಕಿ ಹತ್ಯೆಗೈದ ಘಟನೆ ಬರೇಲಿಯಲ್ಲಿ ನಡೆದಿದೆ.
ಸೋಮವಾರ ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ಶಿಕ್ಷಕನಾಗಿರುವ ಸೋಮಪಾಲ್ (45) ಮನೆಯಲ್ಲಿ ಯಾರು ಇಲ್ಲದಿದ್ದುದನ್ನು ನೋಡಿ ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾರೆ. ಹುಟ್ಟಿಸಿದವನೇ ಕೀಚಕನಂತೆ ವರ್ತಿಸಿರುವುದರಿಂದ ಆಘಾತಗೊಂಡರೂ ಬಾಲಕಿ ಧೈರ್ಯವನ್ನು ಕಳೆದುಕೊಳ್ಳಲಿಲ್ಲ. ಅಲ್ಲೇ ಇದ್ದ ದೊಣ್ಣೆಯಿಂದ ಮನಬಂದಂತೆ ಆತನನ್ನು ಥಳಿಸಿದ್ದಾಳೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಸ್ವಲ್ಪ ಸಮದಯ ನಂತರ ತಾಯಿ ಮನೆಗೆ ಬಂದಿದ್ದು ಮಗಳು ನಡೆದ ಎಲ್ಲ ಸಂಗತಿಯನ್ನು ತಾಯಿಗೆ ತಿಳಿಸಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಬಾಲಕಿಯನ್ನು ವಶಕ್ಕೆ ಪಡೆದರು ಮತ್ತು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.