ಭೋಪಾಲ್ : ಯುವತಿಯೊಬ್ಬಳು ಕಾರಿನಲ್ಲಿ ಸೆಕ್ಸ್ ಮಾಡಲು ನಿರಾಕರಿಸಿದ್ದ ಪ್ರಿಯಕರನ ಮರ್ಮಾಂಗವನ್ನು ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ಅನುಪಪುರ್ ನಲ್ಲಿ ನಡೆದಿದೆ.
ಅಜಯ್ ಹಲ್ಲೆಗೊಳಗಾದ ಯುವಕನಾಗಿದ್ದು, ಈತ ಹಾಗೂ ಯುವತಿ ಸುಮಾರು 12-14 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧದಲ್ಲಿದ್ದು, ಇಬ್ಬರಿಗೂ ಬೇರೆಯವರ ಜೊತೆ ಮದುವೆಯಾಗಿದ್ದರಿಂದ ಇಬ್ಬರು ಕದ್ದುಮುಚ್ಚಿ ಭೇಟಿಯಾಗುತ್ತಿದ್ದರು
ಆ ವೇಳೆ ಯುವತಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಲು ಹೇಳಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ಇದಕ್ಕೆ ಅಜಯ್ ಒಪ್ಪದಿದ್ದಾಗ ಕೋಪಗೊಂಡ ಆಕೆ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ.
ಸದ್ಯಕ್ಕೆ ಕೋಟ್ಮಾ ಕೊಲಿಯರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜಯ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಅಜಯ್ ದೂರಿನ ಮೇಲೆ ಆರೋಪಿ ಯುವತಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಕೆ ಕಾರು ಹತ್ತುವಾಗಲೇ ಚಾಕುವನ್ನು ಬ್ಯಾಗಿನಲ್ಲಿ ತಂದಿದ್ದಳು ಎಂದು ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.