ನವದೆಹಲಿ: ಆನ್ ಲೈನ್ ತರಗತಿ ಮತ್ತು ಅತಿಯಾಗಿ ಹೋಂ ವರ್ಕ್ ನೀಡುತ್ತಿರುವ ಬಗ್ಗೆ ಪುಟಾಣಿಯೊಬ್ಬಳು ಪ್ರಧಾನಿ ಮೋದಿಗೇ ದೂರು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನ್ ಲೈನ್ ಕ್ಲಾಸ್ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೂ ಇರುತ್ತದೆ. ಅದಾದ ಮೇಲೆ ತುಂಬಾ ಹೋಂ ವರ್ಕ್ ಕೊಡ್ತಾರೆ. ನನ್ನಂತಹ ಪುಟ್ಟ ಮಕ್ಕಳಿಗೆ ಯಾಕೆ ಇಷ್ಟೊಂದು ಹೊತ್ತು ಕ್ಲಾಸ್? ಹೋಂ ವರ್ಕ್ ಕೊಡ್ತಾರೆ ಮೋದಿ ಜೀ? 6, 7 ನೇ ಕ್ಲಾಸ್ ನ ದೊಡ್ಡ ಮಕ್ಕಳಿಗೆ ಹೋಂ ವರ್ಕ್ ಕೊಡಲಿ ಎಂದು ಬಾಲೆ ಮುಗ್ಧವಾಗಿ ದೂರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗಮನಕ್ಕೆ ಬಂದಿದ್ದು, ತಕ್ಷಣವೇ ಶಿಕ್ಷಣ ಇಲಾಖೆಗೆ ಈ ಬಗ್ಗೆ ಶಾಲೆಗಳು ಅತಿಯಾಗಿ ಹೋಂ ವರ್ಕ್ ನೀಡದಂತೆ ಸೂಚನೆ ನೀಡುವಂತೆ ಆದೇಶ ನೀಡಿದ್ದಾರೆ.