ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಪುತ್ರ ಸಿಎಂ ಅಖಿಲೇಶ್ ಯಾದವ್ ಮಧ್ಯೆ ಬಿಕ್ಕಟ್ಟು ತಾರಕ್ಕೇರಿರುವ ಸಂದರ್ಭದಲ್ಲಿ, ಸಿಎಂ ಅಖಿಲೇಶ್ ಯಾದವ್‌ಗೆ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆ ನೀಡುವಂತೆ ಬಾಲಕಿಯೊಬ್ಬಳು ಚುನಾವಣೆ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದಿದ್ದಾಳೆ.
10ನೇ ತರಗತಿಯ ಬಾಲಕಿ ತನ್ನ ಕಿರಿಯ ಸಹೋದರನ ನೆರವಿನಿಂದ ಸಿರಿಂಜ್‌ನಿಂದ ರಕ್ತವನ್ನು ತೆಗೆದು ಪತ್ರ ಬರೆದಿದ್ದಾಳೆ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.
ರಾಜಕೀಯ ಬೆಳವಣಿಗೆಗಳತ್ತ ಗಮನಹರಿಸದೆ ವಿದ್ಯಾಭ್ಯಾಸದತ್ತ ಗಮನ ಕೊಡಿ ಎಂದು ಮಕ್ಕಳಿಗೆ ಸಲಹೆ ನೀಡಿರುವುದಾಗಿ ಬಾಲಕಿಯ ತಂದೆ ತಿಳಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಅಡಳಿತರೂಡ ಸಮಾಜವಾದಿ ಪಕ್ಷವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಸಿಎಂ ಅಖಿಲೇಶ್ ಯಾದವ್, ವಿಧಾನಸಭೆಗೆ ಕೇವಲ ಒಂದು ತಿಂಗಳು ಬಾಕಿಯಿರುವಂತೆಯೇ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರೊಂದಿಗೆ ಬಹಿರಂಗವಾಗಿ ಸಮರಕ್ಕೆ ಇಳಿದಿದ್ದಾರೆ. ಎರಡು ಬಣಗಳು ಸಮಾಜವಾದಿ ಪಕ್ಷದ ಚಿಹ್ನೆಯಾದ ಸೈಕಲ್‌ನ್ನು ತಮಗೆ ನೀಡಬೇಕು ಎಂದು ಚುನಾವಣೆ ಆಯೋಗಕ್ಕೆ ಮನವಿ ಮಾಡಿವೆ.
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರಕಾರ ಸಮಾಜವಾದಿ ಲ್ಯಾಪ್‌ಟಾಪ್ ಸ್ಕೀಮ್ ಯೋಜನೆ ಜಾರಿಗೊಳಿಸಿ ಲಕ್ಷಾಂತರ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದ ನಂತರ ಮಕ್ಕಳು ಅಖಿಲೇಶ್ ಅವರ ಬೆಂಬಲಿಗರಾಗಿದ್ದಾರೆ ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.