ನವದೆಹಲಿ: ದೆಹಲಿಯ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಜಪ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಅಲ್ಪ ಸಂಖ್ಯಾತ ಆಯೋಗ ನಗರಾಡಳಿತಕ್ಕೆ ನೋಟಿಸ್ ನೀಡಿದೆ.
ಉತ್ತರ ದೆಹಲಿಯ ನಗರಾಡಳಿತ ಸಂಸ್ಥೆ ತನ್ನ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಜಪಿಸುವುದನ್ನು ಕಡ್ಡಾಯಗೊಳಿಸಿರುವುದನ್ನು ಅಲ್ಪಸಂಖ್ಯಾತರ ಆಯೋಗ ಪ್ರಶ್ನಿಸಿದೆ.
‘ಇದು ನಮ್ಮ ಜಾತ್ಯಾತೀತ ತತ್ವಗಳಿಗೆ ವಿರೋಧಿಯಾಗಿದೆ. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಇದು ಇಷ್ಟವಾಗಲ್ಲ. ಈ ರೀತಿ ಧಾರ್ಮಿಕ ವಿಚಾರಗಳನ್ನು ಹೇರಬಾರದು’ ಎಂದು ಆಯೋಗ ನೋಟಿಸ್ ನಲ್ಲಿ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.