ಪಶ್ಚಿಮ ಬಂಗಾಳ ರಾಜ್ಯದ ಮಾಲ್ಡಾದ ಕೋಟ್ವಾಲಿ ನಿವಾಸಿಯಾಗಿರುವ ಮಹಿಳೆ ತುರ್ತು ಕೆಲಸಕ್ಕಾಗಿ ತುಂಡ್ಲಾಕ್ಕೆ ಬಂದಿದ್ದಳು. ಅಲ್ಲಿ ಅಂಟೋನಿ ಅಲಿಯಾಸ್ ಸಿದ್ಧಾರ್ಥ ಎಂಬ ಪರಿಚಿತ ವ್ಯಕ್ತಿ ಆಕೆಯನ್ನು ಬಲವಂತವಾಗಿ ಹೊಟೆಲ್ ಒಂದಕ್ಕೆ ಕರೆದೊಯ್ದ. ಅಲ್ಲಿಗೆ ಆಗಮಿಸಿದ ಇತರ 6 ಜನರ ಜತೆ ಆತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
30 ವರ್ಷದ ಮಹಿಳೆಯ ಮೇಲೆ 7 ಜನರ ಗುಂಪೊಂದು ಮೈನ್ಪುರಿ ಮತ್ತು ಇತಾಹ್ ಎಂಬಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂತರ ಪೀಡಿತಳನ್ನು ಇತಾಹ್ನಲ್ಲಿರುವ ಇನ್ನೊಂದು ಹೊಟೆಲ್ಗೆ ಕರೆದೊಯ್ಯಲಾಯಿತು. ಅಲ್ಲಿ ಆ 7 ಜನ ಕಾಮುಕರು ಮತ್ತೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಕೋಟ್ವಾಲಿ ಪೊಲೀಸರ ಪ್ರಕಾರ ಆರೋಪಿಗಳ ಕಪಿಮುಷ್ಠಿಯಿಂದ ಹೇಗೋ ತಪ್ಪಿಸಿಕೊಂಡು ಬಂದ ಆಕೆ ಸ್ಥಳೀಯರಿಗೆ ಈ ಕುರಿತು ಮಾಹಿತಿ ನೀಡಿದ್ದಾಳೆ. ಆರೋಪಿಗಳನ್ನು ಹಿಡಿದ ಜನರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.