ಇಂಫಾಲ್ : ಅಂದು ನೆರೆಹೊರೆಯ ಮನೆಗಳಿಗೆಲ್ಲಾ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು, ನನ್ನ ಮನೆಗೂ ಬೆಂಕಿ ಬಿದ್ದಿತ್ತು. ಇಬ್ಬರು ಮಕ್ಕಳನ್ನ ಬೆನ್ನಿಗೆ ಕಟ್ಟಿಕೊಂಡು, ಸೊಸೆ, ನಾದಿನಿಯನ್ನ ಕರೆದುಕೊಂಡು ಬೆಂಕಿಬಿದ್ದ ಮನೆಯಿಂದ ತಪ್ಪಿಸಿಕೊಂಡು ಓಡುತ್ತಿದೆ. ವೇಗವಾಗಿ ಓಡುತ್ತಿದ್ದರಿಂದ ಕಾಲು ತಡವರಿಸಿ ಎಡವಿ ಬಿದ್ದೆ.
ಅಷ್ಟರಲ್ಲಿ ಯಮಸ್ವರೂಪಿಗಳಂತೆ ಬಂದ ದುಷ್ಕರ್ಮಿಗಳು ನನ್ನನ್ನ ಹಿಡಿದು ಎಳೆದಾಡಿ, ಮನಸ್ಸೋ ಇಚ್ಚೆ ಎಳೆದಾಡಿದ್ರು, ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ರು. ಇದು ಮಣಿಪುರದ ಸಂಘರ್ಷದಲ್ಲಿ ಸಿಕ್ಕಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆ ಕಹಿ ಅನುಭವವನ್ನು ಬಿಚ್ಚಿಟ್ಟ ಪರಿ.
ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ನಡೆಯುತ್ತಿದ್ದು ಮಹಿಳಾ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪರಿಹಾರ ಶಿಬಿರದಲ್ಲಿ ವಾಸಿಸುತ್ತಿರುವ ಮಹಿಳೆಯರು ಆಘಾತಕಾರಿ ಘಟನೆಗಳಲ್ಲಿ ತಾವು ಅನುಭವಿಸಿದ ಕಹಿ ಸತ್ಯಗಳನ್ನ ಬಿಚ್ಚಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಭಯಾಕನ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಹಾಗೂ ಅಧಿಕಾರಿಗಳು ಜನರಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ನೊಂದ ಜೀವಗಳು ಕಷ್ಟ ಹೇಳಿಕೊಳ್ಳಲು ಮುಂದೆ ಬರುತ್ತಿವೆ.
ಮಣಿಪುರದಲ್ಲಿ ಸಂಘರ್ಷ ಭುಗಿಲೇಳುತ್ತಿದ್ದಂತೆ ಹಲವು ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದರು. ಇಂತಹ ಸಂದರ್ಭದಲ್ಲಿ ಸುಟ್ಟು ಹೋದ ಮನೆಯಿಂದ 37ರ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳು, ಸೊಸೆ ಮತ್ತು ನಾದಿನಿಯೊಂದಿಗೆ ಓಡಿ ಹೋಗುತ್ತಿದ್ದ ವೇಳೆ ಪುರುಷರಿಂದ ಗುಂಪಿಗೆ ಸಿಕ್ಕಿಬಿದ್ದು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಹೇಳಿಕೊಂಡಿದ್ದಾಳೆ.