ನವದೆಹಲಿ : ಅಯ್ಯೋಧ್ಯೆಯಲ್ಲಿ ಫೆ.21ರಂದು ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುವುದು ಎಂದು ಪರಮ ಧರ್ಮ ಸಂಸತ್ ನ ಸಮಾರಂಭದಲ್ಲಿ ಸ್ವರೂಪಾನಂದ್ ಸ್ವಾಮೀಜಿ ಅವರು ಘೋಷಣೆ ಮಾಡಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆದ ಎರಡು ದಿನಗಳ ಪರಮ ಧರ್ಮ ಸಂಸತ್‌ನ ಸಮಾರೋಪ ಸಮಾರಂಭದ ಬಳಿಕ ಮಾತನಾಡಿದ ಸ್ವರೂಪಾನಂದ್, ‘ನಾವು ಸರ್ವೋಚ್ಚ ನ್ಯಾಯಾಲಯವನ್ನು ಗೌರವಿಸುತ್ತೇವೆ; ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಗೌರವಿಸುತ್ತೇವೆ. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಕಾಲ ಈಗ ಕೂಡಿ ಬಂದಿದೆ’ ಎಂದು ಹೇಳಿದ್ದಾರೆ.
‘ಫೆ.21ರಂದು ಇಟ್ಟಿಗೆಗಳನ್ನು ಹೊತ್ತು ಅಯೋಧ್ಯೆಗೆ ತೆರಳಿ, ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತೇವೆ. ಇದನ್ನು ತಡೆಯಬಾರದು. ಒಂದು ವೇಳೆ ಇದಕ್ಕೆ ಅಡ್ಡಿಪಡಿಸಿದರೆ, ದೇಶದ ಹಿಂದುಗಳೆಲ್ಲರೂ ಮುನ್ನುಗ್ಗಿ ಬರಬೇಕು' ಎಂದು ಅವರು ಕರೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.