ಪ್ರಧಾನಮಂತ್ರಿ ನರೇಂದ್ರ ಮೋದಿ ಅನೇಕ ತಲೆಮಾರುಗಳಿಗೆ ಸ್ಫೂರ್ತಿ ನೀಡಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಂತೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಹೊಗಳಿಕೆಯ ಸುರಿಮಳೆಗೈದಿದ್ದಾರೆ.
ಗಾಂಧಿಯವರ ಉಪ್ಪಿನ ಸತ್ಯಾಗ್ರಹ ಕುರಿತ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಂಸ್ಕೃತಿ ಖಾತೆ ಸಚಿವ ಶರ್ಮಾ, ಸ್ಪೂರ್ತಿಯಾಗಿರುವ ಪ್ರಧಾನಿ ಮೋದಿ ನಮಗೆ ಮತ್ತೊಬ್ಬ ಗಾಂಧೀಜಿಯ ರೂಪದಲ್ಲಿ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧಿಯವರ ಕೊಡುಗೆ ಬಗ್ಗೆ ಸಚಿವರು ಮಾತನಾಡುತ್ತಾ, ಉಪ್ಪಿನ ಸತ್ಯಾಗ್ರಹವು ಕೇವಲ ಚಿಟಿಕೆ ಉಪ್ಪಿನ ವಿಷಯ ಮಾತ್ರವಲ್ಲ, ಅನೇಕ ತಲೆಮಾರುಗಳಿಗೆ ಸ್ಪೂರ್ತಿದಾಯಕ ಹೋರಾಟವಾಗಿದೆ. ಅದರಂತೆ ಪ್ರಧಾನಿ ಮೋದಿ ಕಾರ್ಯವೈಖರಿ ಕೂಡಾ ಹಲವಾರು ತಲೆಮಾರುಗಳಿಗೆ ಸ್ಪೂರ್ತಿದಾಯಕವಾಗಿರುತ್ತದೆ ಎಂದಿದ್ದಾರೆ.
ಪ್ರಧಾನಮಂತ್ರಿ ಮೋದಿ ದೇಶದ ಪ್ರತಿಯೊಬ್ಬ ಪ್ರಜೆಗೆ ಸ್ವಾತಂತ್ರ್ಯದ ಸವಿ ತಲುಪಬೇಕು ಎನ್ನುವುದೇ ಅವರ ಅಭಿಪ್ರಾಯವಾಗಿದೆ. ಗಾಂಧೀಜಿಯವರ ಕನಸುಗಳನ್ನು ನನಸಾಗಿಸುವುದೇ ಅವರ ಗುರಿಯಾಗಿದೆ. ಮಾನವೀಯತೆಯಿಂದ ಅವರ ಕನಸುಗಳನ್ನು ವಿಶ್ವದಾದ್ಯಂತ ಹರಡಿಸುವುದೇ ಸಂಸ್ಕ್ರತಿ ಸಚಿವಾಲಯದ ಕರ್ತವ್ಯವಾಗಿದೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.