ಮಾಜಿ ಸಚಿವ, ಸಂಸದ ಇ. ಅಹ್ಮದ್ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಜೆಟ್ ಮಂಡನೆ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.
ನಿನ್ನೆ ಬಜೆಟ್ ಅಧಿವೇಶನ ಆರಂಭವಾಗುವ ಸಂದರ್ಭದಲ್ಲಿ ರಾಷ್ಟ್ರಪತಿ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ 78 ವರ್ಷದ ಕೇರಳದ ಸಚಿವ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆರ್‌ಎಮ್ಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಸುಕಿನ ಜಾವ 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಲೋಕಸಭೆ ಹಾಲಿ ಸದಸ್ಯರು ನಿಧನರಾದರೆ ಅವರ ಗೌರವಾರ್ಥ ಕಲಾಪವನ್ನು ಒಂದು ದಿನ ಮುಂದೂಡುವುದು ಸಂಪ್ರದಾಯ. ಅದರಲ್ಲೂ ಅಹ್ಮದ್ ಸಂಸತ್ತಿನಲ್ಲಿಯೇ ಕುಸಿದುಬಿದ್ದಿದ್ದು, ಸಭಾಪತಿ ಸುಮಿತ್ರಾ ಮಹಾಜನ್ ಸಂಸತ್ ಕಲಾಪ ನಡೆಯುವುದೋ, ಬೇಡವೋ ಎಂಬ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕಿದೆ.
ಈ ಕುರಿತು ಮಹಾಜನ್, ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್, ವಿರೋಧ ಪತ್ರದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ನಾಯಕರ ಜತೆ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ