Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಿನ್ ಹೊಡೆದ ಟೀ ಬ್ಯಾಗ್`ಗಳಿಗೆ ನಿಷೇಧ

ಪಿನ್ ಹೊಡೆದ ಟೀ ಬ್ಯಾಗ್`ಗಳಿಗೆ ನಿಷೇಧ
ನವದೆಹಲಿ , ಬುಧವಾರ, 26 ಜುಲೈ 2017 (07:49 IST)
ಭಾರತೀಯ ಆಹಾರ ಭದ್ರತಾ ಪ್ರಾಧಿಕಾರವು ಜನವರಿ 1 2018ರಿಂದ ಸ್ಟೇಪಲ್ ಪಿನ್ ಹೊಡೆದ ಟೀಬ್ಯಾಗ್`ಗಳ ಬಳಕೆಯನನ ನಿಷೇಧಿಸಿ ಆದೇಶ ಹೊರಡಿಸಿದೆ.

ಟೀ ಬ್ಯಾಗ್ ತಯಾರಿಸುವಾಗ ಸ್ಟೇಪಲ್ ಪಿನ್ ಹೊಡೆಯದಂತೆ ಟೀ ಉತ್ಪಾದಕರಿಗೆ ಪ್ರಾಧಿಕಾರ ಸ್ಪಷ್ಟ ಸೂಚನೆ ನೀಡಿದೆ. ಟೀ ಬ್ಯಾಗ್ ಅನ್ನನಹಾಲಿನ ಮಿಶ್ರಣದಲ್ಲಿ ಅದ್ದಿ ಟೀ ತಯಾರಿಸಲಾಗುತ್ತೆ. ಈ ಸಂದರ್ಭ ಟೀ ಬ್ಯಾಗ್`ನಲ್ಲಿರುವಲ್ಲಿರುವ ಪಿನ್`ಗಳು ಟೀ ಮೂಲಕ ಅಚಾತುರ್ಯವಾಗಿ ಟೀ ಸೇವಿಸುವವರ ಹೊಟ್ಟೆ ಸೇರುವ ಅಪಾಯ ಕಂಡುಬಂದಿರುವುದರಿಂದ ಪ್ರಾಧಿಕಾರ ಈ ನಿರ್ಧಾರ ಕೈಗೊಂಡಿದೆ.

ಸದ್ಯ, ಮಾರುಕಟ್ಟೆಯಲ್ಲಿ ಪಿನ್ ಹೊಡೆದಿರುವ ಮತ್ತು ಗಂಟು ಕಟ್ಟಿರುವ ಎರಡು ಬಗೆಯ ಟೀ ಬ್ಯಾಗ್`ಗಳು ಲಭ್ಯವಿದೆ. ಭಾರತದಲ್ಲಿ ಪಿನ್ ಹೊಡೆದಿರುವ ಟೀ ಬ್ಯಾಗ್ ಮಾರಾಟ ಅಧಿಕವಾಗಿದೆ. ಹೀಗಾಗಿ, ಟೀ ಬ್ಯಾಗ್ ತಯಾರಿಕೆಯ ನಿಯಮಗಳನ್ನ ಬದಲಾವಣೆ ಮಾಡಿ ಪ್ರಾಧಿಕಾರ ಆದೇಶಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗಾಯುತ ಧರ್ಮ ವಿಚಾರದಲ್ಲಿ ಹೇಳಿಕೆ ಕೊಡಬೇಡಿ: ಬಿಎಸ್‌ವೈ ಕಟ್ಟಾಜ್ಞೆ