ನವದೆಹಲಿ : ಪ್ರಧಾನಿ ಮೋದಿಯವರು ಜಾರಿಗೆ ತಂದ ಫಿಟ್ ಇಂಡಿಯಾ ಯೋಜನೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಹೌದು. ದೇಶದ ಜನರು ಫಿಟ್ ಆಗಿ ಆರೋಗ್ಯವಾಗಿರಲು ಪ್ರಧಾನಿ ಮೋದಿಯವರು ಫಿಟ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದ್ದರು. ಇದೀಗ ಈ ಯೋಜನೆಗೆ ಉತ್ತೇಜನ ನೀಡಲು ಪಿಯೂಷ್ ಗೋಯಲ್ ಫ್ರೀ ಪ್ಲಾಟ್ ಫಾರಂ ಟಿಕೆಟ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಅದರಂತೆ ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಮೆಷಿನ್ ವೊಂದನ್ನು ಇರಿಸಲಾಗಿದ್ದು, ಇದರ ಮುಂದೆ 3 ನಿಮಿಷದಲ್ಲಿ 30ಬಸ್ಕಿ ಹೊಡೆದರೆ ಉಚಿತವಾಗಿ ಪ್ಲಾಟ್ ಫಾರಂ ಟಿಕೆಟ್ ನೀಡುತ್ತದೆ. ಇದು ದೆಹಲಿಯಲ್ಲಿ ಮಾತ್ರ ಜಾರಿಗೆ ಬಂದಿದ್ದು, ಶೀಘ್ರದಲ್ಲಿಯೇ ದೇಶದ ಇತರ ಕಡೆಯೂ ಜಾರಿಗೆ ಬರಲಿರುವುದಾಗಿ ರೈಲ್ವೆ ಸಚಿವರು ತಿಳಿಸಿದ್ದಾರೆ.