ನವದೆಹಲಿ:ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಆಡಳಿತ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಸಭಾ ಸದಸ್ಯೆ ರೂಪಾ ಗಂಗೂಲಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಲ್ಲದೇ ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಪ್ರತಿ ನಿತ್ಯ ಎಂಬಂತೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸುತ್ತಾ ಬಂಗಾಳದಲ್ಲಿ ತೃಣಮೂಲ ನಾಯಕರಿಂದ ತಮ್ಮಪತ್ನಿಯರು ಹಾಗೂ ಪುತ್ರಿಯರು, ಸೊಸೆಯಂದಿರನ್ನು ರಕ್ಷಿಸಿಕೊಳ್ಳುವುದೇ ಜನರಿಗೆ ದೊಡ್ಡ ಸವಾಲು. ನಾಯಕರ ಸಂಪರ್ಕಕ್ಕೆ ಬಂದ ಯಾವುದೇ ಮಹಿಳೆ ಅತ್ಯಾಚಾರಕ್ಕೊಳಗಾಗದೇ 15 ದಿನವೂ ಬದುಕಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ನನ್ನ ಘನತೆಗೆ ಧಕ್ಕೆಯಾಗಿದೆ ಹಾಗೂ ನನಗೆ ಬೆದರಿಕೆಯುಂಟಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ರೂಪಾ ಗಂಗೂಲಿ ವಿರುದ್ಧ ಸಾರ್ವಜನಿಕ ಅವಮಾನಕಾರಿ ಹೇಳಿಕೆ ಹಾಗೂ ಅಪರಾಧಕ್ಕೆ ಪ್ರೇರಣೆ ನೀಡುವಂತಹ ಹೇಳಿಕೆ ನೀಡಿದ ಆರೋಪದಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.