ಬಂಧನದ ಭೀತಿ ಎದುರಿಸುತ್ತಿರುವ ವಿವಾದಾತ್ಮಕ ಇಸ್ಲಾಂ ಧರ್ಮ ಬೋಧಕ ಝಾಕೀರ್ ನಾಯಕ್ ತಮ್ಮ ತಂದೆ ಅಂತಿಮ ಸಂಸ್ಕಾರಕ್ಕೂ ಕೂಡ ಹಾಜರಾಗಿಲ್ಲ.
ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರ ತಂದೆ ಡಾಕ್ಟರ್ ಅಬ್ದುಲ್ ಕರೀಂ ನಾಯಕ್ ಭಾನುವಾರ ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಝಾಕೀರ್ ನಾಯಕ್ ಸದ್ಯ ಮಲೇಶಿಯಾದಲ್ಲಿ ಇದ್ದಾರೆ ಎನ್ನಲಾಗುತ್ತಿದ್ದು ಬಂಧನದ ಭಯದಿಂದ ಭಾರತಕ್ಕೆ ಆಗಮಿಸುತ್ತಿಲ್ಲ.
ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಜನಿಸಿದ್ದ ಕರೀಂ ನಾಯಕ್ ಬಾಂಬೆ ಸೈಕಿಯಾಟ್ರಿಕ್ ಸೊಸೈಟಿಯಲ್ಲಿ ಉದ್ಯೋಗದಲ್ಲಿದ್ದು ನಿವೃತ್ತರಾಗಿದ್ದರು, ಶಿಕ್ಷಣ ತಜ್ಞರಾಗಿ ಸಹ ಅವರು ಗುರುತಿಸಿಕೊಂಡಿದ್ದರು.ವಕೀಲರು, ವೈದ್ಯರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು. ಆದರೆ ಅವರ ಪುತ್ರ ಮಾತ್ರ ತಂದೆಗೆ ಅಂತಿಮ ನಮನ ಸಲ್ಲಿಸಲು ಸಹ ಆಗಮಿಸಲಿಲ್ಲ.
ಜುಲೈ1 ರಂದು ಢಾಕಾದಲ್ಲಿ ದಾಳಿ ನಡೆಸಿದ್ದ ಉಗ್ರರು ಝಾಕೀರ ಉಪನ್ಯಾಸಗಳಿಂದ ಪ್ರಭಾವಿತರಾಗಿದ್ದರು ಎಂಬ ಆರೋಪವಿದೆ. ಅವರ ಒಡೆತನದ ಸ್ವಯಂ ಸೇವಾ ಸಂಸ್ಥೆ ಇಸ್ಲಾಂಮಿಕ್ ಸೇವಾ ಪ್ರತಿಷ್ಠಾನವನ್ನು ಕಾನೂನು ಬಾಹಿರ ಸಂಸ್ಥೆ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಝಾಕೀರ್ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ