ಗಾಂಧಿನಗರ : ಮದುವೆ ಎಂದ ಮೇಲೆ ವಧು-ವರ ಇಬ್ಬರು ಇರಲೇಬೇಕು. ಆದರೆ ಗುಜರಾತಿನ ಗಾಂಧಿನಗರದಲ್ಲಿ ತಂದೆಯೊಬ್ಬರು ತನ್ನ 27 ವರ್ಷದ ಮಗನ ಮದುವೆಯನ್ನು ವಧುವಿಲ್ಲದೆ ಅದ್ಧೂರಿಯಾಗಿ ಮಾಡಿಸಿದ್ದಾರೆ.
ಅಜಯ್ ಬಾರೋಟ್ ವಧುವಿಲ್ಲದೆ ಮದುವೆ ಮಾಡಿಕೊಂಡ ಯುವಕ. ಈತ ಚಿಕ್ಕ ಮಗುವಾಗಿರುವಾಗಲೇ ಆತನ ತಂದೆತಾಯಿ ಮುಂದೆ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದುಕೊಂಡಿದ್ದರು. ಆತನು ಕೂಡ ದೊಡ್ಡವನಾಗುತ್ತಲೇ ತಾನು ಅದ್ದೂರಿಯಾಗಿ ಮದುವೆಯಾಗಬೇಕೆಂದು ಕನಸು ಕಾಣುತ್ತಿದ್ದನು. ಆದರೆ ಆತ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಅಂಗವೈಕಲ್ಯದಿಂದ ಬಳಲತೊಡಗಿದನು. ಇದರಿಂದ ಆತನಿಗೆ ಮದುವೆಯಾಗಲು ಹುಡುಗಿಯರು ಸಿಗುತ್ತಿರಲಿಲ್ಲ. ಆದಕಾರಣ ಮಗನ ಕನಸ್ಸನ್ನು ನನಸು ಮಾಡಬೇಕೆಂದು ಆತನ ತಂದೆ ವಧುವಿಲ್ಲದೇ ಅದ್ದೂರಿಯಾಗಿ ಆತನ ಮದುವೆ ಮಾಡಿಸಿದ್ದಾರೆ.
ಇತರ ಮದುವೆಯಂತೆ ಅಜಯ್ ಮದುವೆ ಆಮಂತ್ರಣ ಪತ್ರಿಕೆ ಕೂಡ ಪ್ರಿಂಟ್ ಮಾಡಿ ಸಂಬಂಧಿಕರಿಗೆ ನೀಡಿದ್ದರು. ಗುಜರಾತಿನ ಸಂಪ್ರದಾಯದಂತೆ ಪುರೋಹಿತರ ಮೂಲಕವೇ ಕಾರ್ಯಕ್ರಮ ನೆರವೇರಿದೆ. ಮದುವೆಯ ಹಿಂದಿನ ದಿನ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮವೂ ಇತ್ತು. ಕಮ್ಯೂನಿಟಿ ಹಾಲ್ ನಲ್ಲಿ ನಡೆದ ಈ ಶುಭಸಮಾರಂಭದಲ್ಲಿ ಸುಮಾರು 800 ಮಂದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.