ಚೆನ್ನೈ: ಮಗಳನ್ನು ಖಾಸಗಿ ಶಾಲೆಗೆ ಸೇರಿಸಲು ಬಡ ತಂದೆಯೊಬ್ಬ ಎಟಿಎಂ ದರೋಡೆಗಿಳಿದ ಪ್ರಕರಣ ತಮಿಳುನಾಡಿನಲ್ಲಿ ನಡೆದಿದೆ.
33 ವರ್ಷದ ವ್ಯಕ್ತಿ ನೈರ್ಮಲ್ಯ ಕಾರ್ಮಿಕ ವೃತ್ತಿಯಲ್ಲಿದ್ದ. ಈತನಿಗೆ ದುಬಾರಿ ಫೀಸ್ ಕಟ್ಟಿ ಮಗಳನ್ನು ಉತ್ತಮ ಶಾಲೆಗೆ ಸೇರಿಸಬೇಕು ಎಂದು ಆಸೆಯಾಗಿತ್ತು. ಇದಕ್ಕೆ ಸಾಕಷ್ಟು ಹಣವಿಲ್ಲದಿದ್ದರಿಂದ ಎಟಿಎಂಗೆ ಕನ್ನ ಹಾಕಲು ಯತ್ನಿಸಿದ್ದ.
ಆದರೆ ದರೋಡೆಗೆ ಯತ್ನಿಸಿರುವುದು ಪೊಲೀಸರ ಗಮನಕ್ಕೆ ಬಂದಿದ್ದು ತಕ್ಷಣವೇ ಆತನನ್ನು ಬಂಧಿಸಿದ್ದಾರೆ. ಈ ವೇಳೆ ಶಾಲೆಗೆ ಫೀಸ್ ಕಟ್ಟಲು ದರೋಡೆಗೆ ಮುಂದಾಗಿದ್ದಾಗಿ ತಿಳಿಸಿದ್ದಾನೆ.