ಲಕ್ನೋ: ಪ್ರಿಯತಮನ ಮನೆಯಲ್ಲಿ ಪತ್ತೆಯಾದ ಮಗಳಿಗೆ ತಂದೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ಹತ್ಯೆ ನಡೆಸಿದ ಧಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮನೆ ಬಿಟ್ಟು ಪರಾರಿಯಾಗಿದ್ದ ಮಗಳನ್ನು ತಂದೆ ಹುಡುಕಿದಾಗ ಅದೇ ಗ್ರಾಮದ ಅಂಗಡಿ ವ್ಯಾಪಾರಿಯಾಗಿದ್ದ ಯುವಕನ ಮನೆಯಲ್ಲಿ ಪತ್ತೆಯಾಗಿದ್ದಳು. ಇವರಿಬ್ಬರೂ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮಾನ ಕಳೆದ ಮಗಳ ಮೇಲೆ ಸಿಟ್ಟಿಗೆದ್ದ ತಂದೆ ಆಕೆಯನ್ನು ಮನೆಯಿಂದ ಹೊರತಂದು ಥಳಿಸಿದ್ದಲ್ಲದೆ, ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿ ತಂದೆಯನ್ನು ಬಂಧಿಸಲಾಗಿದೆ.