Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಮಸ್ಯೆ ಪರಿಹರಿಸಿಕೊಳ್ಳಲು ಬಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ನಕಲಿ ದೇವಮಾನವ

ಸಮಸ್ಯೆ ಪರಿಹರಿಸಿಕೊಳ್ಳಲು ಬಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ನಕಲಿ ದೇವಮಾನವ
ಮಧ್ಯಪ್ರದೇಶ , ಶನಿವಾರ, 15 ಆಗಸ್ಟ್ 2020 (10:02 IST)
ಮಧ್ಯಪ್ರದೇಶ : ದೇವಮಾನವನೆಂದು ಘೋಷಿಸಿಕೊಂಡು ಸಮಸ್ಯೆ ಕೇಳಲು ಬಂದ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ನರಸಿಂಗ್ ಪುರ ಜಿಲ್ಲೆಯಲ್ಲಿ ನಡೆದಿದೆ.

ಧರ್ಮೇಂದ್ರ ದಾಸ್ ಅಲಿಯಾಸ್ ಧರ್ಮೇಂದ್ರ ದುಬೆ(35) ಇಂತಹ ಕೃತ್ಯ ಎಸಗಿದ ಆರೋಪಿ. ಈತನಿಗೆ ಮದುವೆಯಾಗು ಒಂದು ಮಗು ಇದ್ದರೂ ಸಹ ಸಂನ್ಯಾಸತ್ವ ಸ್ವೀಕರಿಸಿ ತಾನು ದೇವ ಮಾನವನೆಂದು ತಾನೇ ಘೋಷಿಸಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಈತನ ಆಶ್ರಮಕ್ಕೆ ಸಮಸ್ಯೆ ಕೇಳಲು ಬಂದ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿ ಮತ್ತೆ ಮತ್ತೆ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನ ಆಶ್ರಮದ ಮೇಲೆ ದಾಳಿ ನಡೆಸಿದಾಗ ಅತ್ಯಾಚಾರದ ಸಿಡಿಗಳು, ಗಾಂಜಾಗಳು ಪತ್ತೆಯಾಗಿವೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾದಿಂದಾಗಿ ಪ್ರಧಾನಿ ಮೋದಿಗೆ ಇಂದು ಸ್ವಾತಂತ್ರ್ಯೋತ್ಸವದಲ್ಲಿ ಈ ಅವಕಾಶವಿಲ್ಲ!