ನವದೆಹಲಿ: ಭಾರತದ ಚುನಾವಣೆ ಪ್ರಕ್ರಿಯೆಯಲ್ಲಿ ಹೊಸ ಬದಲಾವಣೆಗಳ ಹರಿಕಾರ ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯ ಚುನಾವಣಾಧಿಕಾರಿ ಟಿಎನ್ ಶೇಷನ್ ಇದೀಗ ವೃದ್ಧಾಶ್ರಮದಲ್ಲಿ ದಿನ ಕಳೆಯುತ್ತಿದ್ದಾರೆ!
ಮಕ್ಕಳಿಲ್ಲದ 85 ವರ್ಷದ ಶೇಷನ್ ದಂಪತಿ ತಮಿಳುನಾಡಿನ ರಾಜಧಾನಿ ಚೆನ್ನೈಯಲ್ಲಿರುವ ಗುರುಕುಲಂ ವೃದ್ಧಾಶ್ರಮದಲ್ಲಿ ದಿನ ಕಳೆಯುತ್ತಿದ್ದಾರೆ. ಶೇಷನ್ ಮತ್ತು ಪತ್ನಿ ಹಲವು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ವೃದ್ಧಾಶ್ರಮದಲ್ಲಿ ದಿನಕಳೆಯುತ್ತಿದ್ದಾರೆ.
ಇಬ್ಬರೂ ಕೇರಳದ ಪಾಲಕ್ಕಾಡಿನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಆದರೆ ನೋಡಿಕೊಳ್ಳುವವರಿಲ್ಲದ ಕಾರಣ, ನೆಮ್ಮದಿಯಿಂದ ಜೀವನ ಮಾಡಲು ವೃದ್ಧಾಶ್ರಮ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಪಿಂಚಣಿ ಹಣದಿಂದ ತಮ್ಮ ಜತೆಗಿರುವ ವೃದ್ಧಾಶ್ರಮದ ಸದಸ್ಯರಿಗೂ ದಂಪತಿ ಆರ್ಥಿಕವಾಗಿ ನೆರವಾಗುತ್ತಿದ್ದಾರಂತೆ. ತಮ್ಮಅಧಿಕಾರಾವಧಿಯಲ್ಲಿ ನಿರ್ಬೀಡೆಯಿಂದ ಕರ್ತವ್ಯ ನಿರ್ವಹಿಸಿದ ಶೇಷನ್ ಇಂದು ಯಾರಿಗೂ ಹೊರೆಯಾಗಲು ಇಷ್ಟಪಡದೆ ವೃದ್ಧಾಶ್ರಮ ಸೇರಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ