ಪಿಎಫ್ ಹಿಂಪಡೆಯುವಿಕೆಗೆ ಸಂಬಂಧಿಸಿದಂತಹ ಕ್ಲೈಮುಗಳನ್ನು ಇಪಿಎಫ್ಒ ಸರಳೀಕರಿಸಿದ್ದು. ಮತ್ತಿಗ ಭವಿಷ್ಯ ನಿಧಿಯ ವಿವಿಧ ಕ್ರೈಮ್‌ಗಳಿಗೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕಿಲ್ಲ್ಲ. ಕೇವಲ ಒಂದೇ ಪುಟದ ಅರ್ಜಿ ಸಾಕು.
ಜತೆಗೆ ಉದ್ಯೋಗದಾತರ ಅನುಮತಿ ಪಡೆಯದೇ ಹಣವನ್ನು ಹಿಂಪಡೆಯಬಹುದು ಎಂದು ನೌಕರರ ಭವಿಷ್ಯ ನಿಧಿ ಒಕ್ಕೂಟ ತಿಳಿಸಿದೆ. ಭವಿಷ್ಯ ನಿಧಿ ಖಾತೆದಾರರಿಗೆ ಯುಎಎನ್( ಸಾರ್ವತ್ರಿಕ ಖಾತೆ ಸಂಖ್ಯೆ) ಯನ್ನು ನೀಡಲಾಗಿದ್ದು, ಇದರ ಜತೆ ಆಧಾರ್ ನಂಬರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಜೋಡಿಸಿದ್ದರೆ, ಉದ್ಯೋಗದಾತರ ಅನುಮತಿ ಇಲ್ಲದೆ ಹಣಕ್ಕಾಗಿ ಕ್ಲೈಮ್ ಮಾಡಬಹುದು.
ಆದರೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಯುಎಎನ್ ಸಂಖ್ಯೆಗೆ ಜೋಡಿಸದಿದ್ದವರು ಹೊಸ ಸಂಯುಕ್ತ ಕ್ಲೈಮು ನಮೂನೆಯನ್ನು ಉದ್ಯೋಗದಾತರ ಅನುಮತಿಯೊಂದಿಗೆ ಸಲ್ಲಿಸಬಹುದು.
ಎಲ್ಲಾ ಅಂದುಕೊಂಡಂತಾದರೆ ಇದೇ ಬರುವ (2017) ಮೇ ತಿಂಗಳಿನಿಂದ ಭವಿಷ್ಯನಿಧಿ ಪಿಂಚಣಿ (ಇಪಿಎಸ್) ಹಣಕ್ಕೆ ಆನ್ಲೈನ್ ಮೂಲಕ ಕ್ಲೈಮ್ ಮಾಡಬಹುದಾಗಿದೆ.