ಜಮ್ಮು : ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಈ ಕಂಪನವನ್ನು ಖಚಿತಪಡಿಸಿದ್ದು, ಕಿಶ್ತ್ವಾರ ಈ ಭೂಕಂಪನದ ಕೇಂದ್ರ ಬಿಂದು ಎಂದು ಹೇಳಿದೆ. ಸುದೈವವಶಾತ್ ಯಾವುದೇ ಪ್ರಾಣಾಪಾಯ ಹಾಗೂ ಆಸ್ತಿಹಾನಿಗಳು ಇದುವರೆಗೂ ವರದಿಯಾಗಿಲ್ಲ. ಕೆಲ ದಿನಗಳ ಹಿಂದಷ್ಟೇ ಸತತವಾಗಿ ಎರಡು ಬಾರಿ ಜಮ್ಮ ಕಾಶ್ಮೀರದಲ್ಲಿ ಲಘು ಪ್ರಮಾಣದ ಭೂಕಂಪ ಸಂಭವಿಸಿತ್ತು. ಮಂಗಳವಾರ ಮುಂಜಾನೆ ಜಮ್ಮು ಕಾಶ್ಮೀರದಲ್ಲಿ ಭೂಮಿ ಕಂಪಿಸಿದೆ. ಬೆಳಗ್ಗೆ ಸುಮಾರು 8.53 ರ ಸುಮಾರಿಗೆ ನಡೆದ ಈ ಭೂಕಂಪ ರಿಕ್ಟರ್ ಮಾಪಕದಲ್ಲಿ 3.6 ರಷ್ಟು ಮಾಪನವನ್ನು ದಾಖಲಿಸಿದೆ.