ನಿನ್ನೆಯಿಂದ ರಾಜ್ಯದ ಕೆಲವೆಡೆ ಭೂಕಂಪನದ ಅನುಭವವಾಗುತ್ತಿದೆ. ದವಣಗೆರೆಯ ಹಲವೆಡೆ ಕಂಪನದ ಅನುಭವವಾಗಿದೆ. ಗಾಂಧಿನಗರ ಗ್ರಾಮದಲ್ಲಿ ಕಂಪನದ ಅನುಭವವಾಗಿದ್ದು, ಭೂವಿಜ್ಞಾನಿ ಮಲ್ಲೇಶ್ ಮತ್ತು ತಹಸೀಲ್ದಾರ್ ಭೇಟಿ ನಿಡಿ ಪರಿಸೀಲನೆ ನಡೆಸಿದ್ದಾರೆ.
ಗಾಮಧಿನಗರ ಗ್ರಾಮದಲ್ಲಿ ಕಂಪನದ ಅನುಭವ ಹೆಚ್ಚಾಗಿದ್ದು, ಭೂಮಿ ಬಿರುಕುಬಿಟ್ಟಿದೆ. ಕಟ್ಟಡಗಳು ಅಲುಗಾಡಿದ್ದು, ಜನ ಹೊರಗೆ ಓಡಿ ಬಂದಿದ್ದಾರೆ. ಭೂಕಂಪನ ತೀವ್ರತೆ ಕುರಿತಂತೆ ಇನ್ನಷ್ಟೆ ಮಾಹಿತಿ ಬರಬೇಕಿದೆ.
ಈ ಕುರಿತು ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿರುವ ಮಲ್ಲೇಶ್, ಗ್ರಾಮದಲ್ಲಿ ಮನೆಗಳು ಮತ್ತು ಭೂಮಿ ಬಿರುಕು ಬಿಟ್ಟಿವೆ. ಸಮೀಪದಲ್ಲೇ ಕೆಲ ಗಣಿಗಾರಿಕೆ ಸಹ ಇದೆ. ಭೂಮಿಯ ತಾಪಮಾನ ಹೆಚ್ಚಳದಿಂದಲೂ ಹೀಗೆ ಆಗುವ ಸಾಧ್ಯತೆ ಇದೆ. ಗೌರಿಬಿದನೂರಿನಲ್ಲಿರುವ ಭೂಮಾಪನ ಕೆಂದ್ರದಿಂದ ವರದಿ ಬಂದ ನಂತರ ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದಿದ್ದಾರೆ.