Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಂದ್ರಾ ರೈಲು ನಿಲ್ದಾಣದಲ್ಲಿ ಬೆಳ್ಳಬೆಳಿಗ್ಗೆ ನೂಕು ನುಗ್ಗಲು: ಕಾಲ್ತುಳಿತದಲ್ಲಿ 9 ಮಂದಿಗೆ ಗಾಯ

ಬಾಂದ್ರಾ ರೈಲು ನಿಲ್ದಾಣದಲ್ಲಿ ಬೆಳ್ಳಬೆಳಿಗ್ಗೆ ನೂಕು ನುಗ್ಗಲು: ಕಾಲ್ತುಳಿತದಲ್ಲಿ 9 ಮಂದಿಗೆ ಗಾಯ

Sampriya

ಮುಂಬೈ , ಭಾನುವಾರ, 27 ಅಕ್ಟೋಬರ್ 2024 (12:11 IST)
ಮುಂಬೈ:  ಇಲ್ಲಿನ ಬಾಂದ್ರಾ ರೈಲು ನಿಲ್ದಾಣದಲ್ಲಿ ಇಂದು ಬೆಳಗ್ಗೆ ಪ್ರಯಾಣಿಕರು ರೈಲು ಹತ್ತುವ ವೇಳೆ ಉಂಟಾದ ನೂಕು ನುಗ್ಗಲಿನಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಬಾಂದ್ರಾ ಟರ್ಮಿನಸ್‌ನ ಪ್ಲಾಟ್‌ಫಾರ್ಮ್ ನಂಬರ್ ಒಂದರಲ್ಲಿ ಬೆಳಗ್ಗೆ 5.56ಕ್ಕೆ ಈ ಘಟನೆ ನಡೆದಿದೆ. 22921 ಬಾಂದ್ರಾ-ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಹತ್ತುವ ವೇಳೆ ವಿಪರೀತ ಜನದಟ್ಟಣೆ ಉಂಟಾಗಿದೆ.

ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳುತ್ತಿದ್ದ ರೈಲನ್ನು ಹತ್ತಲು ಪ್ರಯಾಣಿಕರು ಯತ್ನಿಸಿದಾಗ ನೂಕುನುಗ್ಗಲು ಸೃಷ್ಟಿಯಾಗಿದೆ. ಗಾಯಗೊಂಡವರ ಪೈಕಿ 9 ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ದೀಪಾವಳಿ  ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಲು ರೈಲನ್ನು ಹತ್ತುವ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದೆ . ಬಾಂದ್ರಾದಿಂದ ಗೋರಖ್‌ಪುರಕ್ಕೆ ಹೋಗುವ ರೈಲು ಸಂಖ್ಯೆ 22921 ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1ಕ್ಕೆ ಬಂದಿತ್ತು. ಗೋರಖ್‌ಪುರದ ಸಾಪ್ತಾಹಿಕ ರೈಲು ಭಾನುವಾರ ಬೆಳಿಗ್ಗೆ 5:10ಕ್ಕೆ ಹೊರಡಬೇಕಿತ್ತು. ಆದರೆ ರೈಲು 5:56ಕ್ಕೆ ನಿಲ್ದಾಣಕ್ಕೆ ಬಂದಿದೆ. ಮೊದಲೇ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿ ಈ ಘಟನೆ ನಡೆದಿದೆ.

ಗಾಯಗೊಂಡವರನ್ನು ರೈಲ್ವೇ ಪೊಲೀಸ್ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು ಸ್ಟ್ರೆಚರ್‌ಗಳಲ್ಲಿ ಎತ್ತಿಕೊಂಡು ಸಾಗಿಸಿದ್ದಾರೆ. ಸದ್ಯ ರೈಲ್ವೆ ನಿಲ್ದಾಣದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಗಾಯಾಳುಗಳನ್ನು ಭಾಭಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಎಂಸಿ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನಾಂಬೆ ದೇಗುಲದಲ್ಲಿ ಭಕ್ತ ಸಾಗರ: ದೇವಿಯ ದರ್ಶನ ಪಡೆದು ಭಕ್ತರು ಪುನೀತ