ತ್ರಿಪುರಾ: ಈ ರಾಜ್ಯದಲ್ಲಿ ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ಸನ್ ಗ್ಲಾಸ್, ಜೀನ್ಸ್ ತೊಟ್ಟುಕೊಳ್ಳುವಂತಿಲ್ಲ! ಹಾಗಂತ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ತ್ರಿಪುರಾದಲ್ಲಿ ಇಂತಹದ್ದೊಂದು ವಿಚಿತ್ರ ರೂಲ್ಸ್ ಮಾಡಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಕೆಲಸದ ಅವಧಿಯಲ್ಲಿ ಅಧಿಕಾರಿಗಳು ಈ ಡ್ರೆಸ್ ಧರಿಸುವಂತಿಲ್ಲ. ಆದರೆ ಸರ್ಕಾರ ಈ ನಿರ್ಧಾರಕ್ಕೆ ವಿಪಕ್ಷ ಕಾಂಗ್ರೆಸ್, ಸಿಪಿಎಂ ಟೀಕೆ ಮಾಡಿದ್ದು, ಇದು ‘ಊಳಿಗ ಪದ್ಧತಿಯ ಲಕ್ಷಣ’ ಎಂದು ಬಣ್ಣಿಸಿವೆ.
ಅಷ್ಟೇ ಅಲ್ಲದೆ, ಮೀಟಿಂಗ್ ನಡೆಯುವಾಗ ಮೊಬೈಲ್ ಬಳಸುವುದು, ಮೆಸೇಜ್ ನೋಡುವುದು ಇತ್ಯಾದಿ ಮಾಡುವುದಕ್ಕೂ ನಿಷೇಧ ಹೇರಲಾಗಿದೆ. ಸರ್ಕಾರಿ ಕಾರ್ಯಕ್ರಮಗಳು, ಕಚೇರಿಗಳಲ್ಲಿ ಶಿಸ್ತಾಗಿ ಇರಬೇಕೆಂದು ಸರ್ಕಾರ ಸುತ್ತೋಲೆ ಮೂಲಕ ಆದೇಶ ಹೊರಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.