ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮರ್ಮು ಅವರನ್ನು ಬಿಜೆಪಿ ಘೋಷಿಸಿದ ಬೆನ್ನಲ್ಲೇ ಅವರಿಗೆ ಝೆಡ್ ಭದ್ರತೆ ಒದಗಿಸಲಾಗಿದೆ.
ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆದಿವಾಸಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಘೋಷಿಸಿದ 24 ಗಂಟೆ ಕಳೆಯುವ ಮುನ್ನವೇ ಅವರಿಗೆ ಸಿಎಆರ್ ಪಿಎಫ್ ಜೆಡ್ ಭದ್ರತೆ ನೀಡಲಾಗಿದೆ. ಆದರೆ ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಯಾವುದೇ ಭದ್ರತೆ ನೀಡಲಾಗಿಲ್ಲ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮಂಗಳವಾರ ದ್ರೌಪದಿ ಮುರ್ಮ ಅವರನ್ನು NDA ಯ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ
ದ್ರೌಪದಿ ಮರ್ಮ ಅವರು ದಶಕಗಳಿಂದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ 64 ವರ್ಷದ ದ್ರೌಪದಿ ಮರ್ಮ ಅವರು ಜಾರ್ಖಂಡ ನ ರಾಜ್ಯಪಾಲರಾಗಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮರ್ಮ ಅವರನ್ನು ಆಯ್ಕೆ ಮಾಡಲಾಗಿತ್ತು
ಇವರು ಅಂತಿಮವಾಗಿ ಭಾರತದ ಮುಂದಿನ ರಾಷ್ಟ್ರಪತಿಯಾದರೆ ಆದಿವಾಸಿ ಸಮುದಾಯದ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ಸಾಧನೆಗೆ ಪಾತ್ರರಾಗುತ್ತಾರೆ
ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರ ಹೆಸರನ್ನು ಅನೌನ್ಸ್ ಮಾಡುವ ಸಾಧ್ಯತೆ ಇದೆ.