ಚೆನ್ನೈ: ನನ್ನ ನೋಡಿ ನಗಬೇಡಿ. ಹೀಗೆಂದು ವಿಶ್ವಾಸಮತ ಯಾಚಿಸಲಿರುವ ತಮಿಳುನಾಡು ಹೊಸ ಸಿಎಂ ಇ. ಪಳನಿಸ್ವಾಮಿಗೆ ವಿರೋಧ ಪಕ್ಷ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಪುಕ್ಕಟೆ ಸಲಹೆ ಕೊಟ್ಟಿದ್ದಾರೆ.
ಶಶಿಕಲಾ ನಟರಾಜನ್ ವಿರುದ್ಧ ಬಂಡಾಯ ಎದ್ದಿದ್ದ ಪನೀರ್ ಸೆಲ್ವಂ ಡಿಎಂಕೆ ಜತೆ ಒಳ ಮೈತ್ರಿ ಮಾಡಿಕೊಂಡಿದ್ದರು ಎಂದು ಈ ಹಿಂದೆ ಕೆಲವರು ಆಪಾದಿಸಿದ್ದರು. ಅದೇ ಹಿನ್ನಲೆಯಲ್ಲಿ ಅವರು ಈ ಮಾತು ಹೇಳಿರಬಹುದು.
ಇದೇ ಸಂದರ್ಭದಲ್ಲಿ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಾಗಿದಿರಿ ಎಂದೂ ಪಳನಿಸ್ವಾಮಿಗೆ ಸ್ಟಾಲಿನ್ ಸಲಹೆ ಕೊಟ್ಟಿದ್ದಾರೆ. ಇದೇ ವೇಳೆ ವಿಶ್ವಾಸ ಮತ ಯಾಚನೆ ಸಂದರ್ಭ ತಮ್ಮ ಪಕ್ಷದ ಎಲ್ಲಾ 89 ಶಾಸಕರು ಸರ್ಕಾರದ ವಿರುದ್ಧವಾಗಿ ಮತ ಹಾಕುವುದಾಗಿ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ