ಜೈಪುರ : ಮನುಷ್ಯರು ಹೊಟ್ಟೆಗೆ ಹಣ್ಣು, ತರಕಾರಿ, ಅನ್ನ ಮತ್ತು ಹೆಚ್ಚು ಆಧುನಿಕತೆಗೆ ಹೊಂದಿಕೊಡವರು ಪಿಜ್ಜಾ ಇನ್ನು ಮುಂತಾದ ಬಾಯಿಗೆ ರುಚಿ ಇರುವ ಪದಾರ್ಥಗಳನ್ನು ತಿನ್ನುತ್ತಾರೆ.
ಆದರೆ ರಾಜಸ್ಥಾನದ ಜೋಧ್ಪುರದಲ್ಲಿ 36 ವರ್ಷದ ವ್ಯಕ್ತಿಯೊಬ್ಬ 1 ರೂಪಾಯಿಯ 63 ನಾಣ್ಯಗಳನ್ನು ನುಗ್ಗಿರುವ ವಿಲಕ್ಷಣ ಘಟನೆ ನಡೆದಿದೆ.
ಜುಲೈ 27 ರಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ವ್ಯಕ್ತಿಯೊಬ್ಬನನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆತನ ಸ್ಥಿತಿ ಕಂಡು ವೈದ್ಯರು ಸ್ಕ್ಯಾನ್ ಮಾಡಿಸುವಂತೆ ಸೂಚನೆ ಕೊಟ್ಟಿದ್ದಾರೆ.
ಈ ವೇಳೆ ಆತನ ಹೊಟ್ಟೆಯಲ್ಲಿ ಲೋಹದ ಗಡ್ಡೆಯನ್ನು ಕಂಡುಹಿಡಿದಿದ್ದಾರೆ. ಆದರೆ, ವೈದ್ಯರು ಎಕ್ಸ್ರೇ ನೋಡಿದಾಗ ಸತ್ಯ ಬಯಲಿಗೆ ಬಂದಿದೆ.
ಈ ಹಿನ್ನೆಲೆ ಎಂಡಿಎಂ ಆಸ್ಪತ್ರೆಯ ವೈದ್ಯರ ತಂಡವು ಎಂಡೋಸ್ಕೋಪಿಕ್ ಕಾರ್ಯವಿಧಾನದ ಸಹಾಯದಿಂದ ಎರಡು ದಿನಗಳ ಸುದೀರ್ಘ ಚಿಕಿತ್ಸೆಯಲ್ಲಿ ವ್ಯಕ್ತಿಯ ಹೊಟ್ಟೆಯಿಂದ ನಾಣ್ಯಗಳನ್ನು ಹೊರತೆಗೆದಿದೆ.