ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿದಾಗ ಅವರ ದೇಹದಲ್ಲಿ ನಾಡಿಮಿಡಿತವಿರಲಿಲ್ಲ ಎಂದು ವೈದ್ಯೆ ರಾಮಸೀತ ಆರೋಪಿಸಿದ್ದಾರೆ.
ಅಪೋಲೋ ಆಸ್ಪತ್ರೆ ವೈದ್ಯೆ ರಾಮಸೀತಾ ಅವರ ಆರೋಪವನ್ನು ತಳ್ಳಿಹಾಕಿದ್ದು ವೈದ್ಯೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಇದೀಗ ವೈದ್ಯೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 22 ರಂದು ಜಯಲಲಿತಾರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿದಾಗ ನಾನು ಕರ್ತವ್ಯದಲ್ಲಿದ್ದೆ. ಜಯಲಲಿತಾರಲ್ಲಿ ನಾಡಿ ಮಿಡಿತವಿರಲಿಲ್ಲ. ಇತರ ವೈದ್ಯರನ್ನು ಅವರ ಹತ್ತಿರ ಬಿಡುತ್ತಿರಲಿಲ್ಲ ಎಂದು ನ್ಯೂಟ್ರೀಷ್‌ನಿಷ್ಠ್ ರಾಮಸೀತಾ ಹೇಳಿಕೆ ಜಯಾ ಸಾವಿನ ಅನುಮಾನಗಳು ಮತ್ತಷ್ಟು ಹೆಚ್ಚಾಗಿವೆ.
ಜಯಲಲಿತಾ ಸಾವಿನ ನಂತರ ಜಯಾ ಸೊಸೆ ದೀಪಾ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ವೈದ್ಯೆ ರಾಮಸೀತಾ, ಜಯಾ ಸಾವಿನ ಬಗ್ಗೆ ಅನುಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.