ನವದೆಹಲಿ: ರೋಗಿಗೆ ಅರ್ಜೆಂಟಾಗಿ ರಕ್ತ ಬೇಕೆಂದಾಗ ವೈದ್ಯರು ಅವರ ಕುಟುಂಬದವರಿಗೆ ತಿಳಿಸಿ ರಕ್ತ ಅರೇಂಜ್ ಮಾಡುವಂತೆ ಹೇಳುತ್ತಾರೆ. ಆದರೆ ದೆಹಲಿಯ ಈ ವೈದ್ಯ ತಾನೇ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜ್ಯೂನಿಯರ್ ವೈದ್ಯ ಡಾ. ಮೊಹಮಮ್ ಫವಾಜ್ ಮಾನವೀಯತೆ ಮೆರೆದ ವೈದ್ಯ. ಸೆಪ್ಟಿಕ್ ಆಘಾತಕ್ಕೊಗೊಳಗಾದ ರೋಗಿಗೆ ಅರ್ಜೆಂಟ್ ಆಗಿ ಶಸ್ತ್ರಕ್ರಿಯೆ ಆಗಬೇಕಿತ್ತು. ಈ ಸಮಯದಲ್ಲಿ ಆ ರೋಗಿಯ ಗುಂಪಿನ ರಕ್ತ ತಕ್ಷಣಕ್ಕೆ ಲಭ್ಯವಿರಲಿಲ್ಲ.
ಹೀಗಾಗಿ ಅದೇ ಗುಂಪಿನ ರಕ್ತ ಹೊಂದಿದ್ದ ವೈದ್ಯ ಫವಾಜ್ ತಾವೇ ರೋಗಿಗೆ ರಕ್ತದಾನ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ವೈದ್ಯ ಫವಾಜ್ ನಾನು ವೈದ್ಯನಾಗಿ ನನ್ನ ಕರ್ತವ್ಯ ಮಾಡಿದ್ದೇನಷ್ಟೇ. ರೋಗಿ ತನ್ನ ಪತ್ನಿಯ ಜತೆ ಬಂದಿದ್ದ. ಆತನಿಗೆ ತೀವ್ರ ಗಾಯವಾಗಿತ್ತು ಮತ್ತು ಅರ್ಜೆಂಟ್ ಆಗಿ ರಕ್ತದ ಅಗತ್ಯವಿತ್ತು. ಆದರೆ ಕಾಯುತ್ತಾ ಕೂರಲು ಸಮಯವಿರಲಿಲ್ಲ. ಹೀಗಾಗಿ ನಾನು ರಕ್ತ ದಾನ ಮಾಡಿದೆ ಎಂದಿದ್ದಾರೆ.