ನವದೆಹಲಿ: ಇದನ್ನು ವೈದ್ಯರ ನಿರ್ಲ್ಯಕ್ಷ ಎನ್ನಬೇಕೋ ಅಥವಾ ಆ ಮಗುವಿನ ಅದೃಷ್ಟ ಎನ್ನಬೇಕೋ ಗೊತ್ತಿಲ್ಲ. ದೆಹಲಿಯ ಆಸ್ಪತ್ರೆಯೊಂದರ ವೈದ್ಯರ ನಿರ್ಲ್ಯಕ್ಷದಿಂದಾಗಿ ಜೀವಂತವಿದ್ದ ಮಗುವನ್ನು ಪೋಷಕರು ಮಣ್ಣು ಮಾಡಲು ಹೊರಟಿದ್ದರು.
ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯರು ಈ ರೀತಿ ಎಡವಟ್ಟು ಮಾಡಿಕೊಂಡಿದ್ದಾರೆ. ವಿಪರೀತ ರಕ್ತ ಸ್ರಾವದಿಂದಾಗಿ ಐದು ತಿಂಗಳ ಗರ್ಭಿಣಿ ಮಹಿಳೆಗೆ ಗರ್ಭಪಾತವಾಗಿತ್ತು. ಮಗುವನ್ನು ಹೊರತೆಗೆದ ವೈದ್ಯರು ಅದು ಮೃತಪಟ್ಟಿದೆಯೆಂದು ಪ್ಯಾಲಿಥಿನ್ ಕವರ್ ನಲ್ಲಿ ಹಾಕಿ ಕುಟುಂಬದವರಿಗೆ ಹಸ್ತಾಂತರಿಸಿದ್ದರು.
ಆದರೆ ಮಗುವನ್ನು ಮಣ್ಣು ಮಾಡಲು ಹೊರಡುವಾಗ ಕುಟುಂಬ ಸದಸ್ಯರಿಗೆ ಮಗುವಿನ ಕ್ಷೀಣ ಉಸಿರಾಟ ಗೊತ್ತಾಯಿತು. ಹೀಗಾಗಿ ತಕ್ಷಣವೇ ಮಗುವನ್ನು ಐಸಿಯುಗೆ ಶಿಫ್ಟ್ ಮಾಡಲಾಯಿತು. ಆದರೂ 30 ಗಂಟೆಗಳ ಸತತ ಹೋರಾಟದ ನಂತರ ಮಗು ಮೃತಪಟ್ಟಿತು.
ಒಂದು ವೇಳೆ ತಕ್ಷಣವೇ ಮಗುವಿಗೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ, ಬದುಕಿರುತ್ತಿತ್ತೇನೋ. ಇದೀಗ ವೈದ್ಯರ ನಿರ್ಲ್ಯಕ್ಷದಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ವೈದ್ಯರಿಂದ ವರದಿ ಕೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ