ನವದೆಹಲಿ : ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಎನ್ ಡಿಎ ಸರ್ಕಾರದ ಮೊದಲ ಬಜೆಟ್ ಅನ್ನು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಇದರಲ್ಲಿ ಯಾವುದೆಲ್ಲಾ ಏರಿಕೆಯಾಗಿದೆ, ಯಾವುದೆಲ್ಲಾ ಇಳಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಏರಿಕೆ:
*ಬಂಗಾರದ ಮೇಲಿನ ಆಮದು ಸುಂಕ ಶೇ.10ರಿಂದ 12.05ಕ್ಕೆ ಏರಿಕೆ
*ಪೆಟ್ರೋಲ್ ಮತ್ತು ಡೀಸೆಲ್ ಲೀಟರ್ ಗೆ 1 ರೂ.ಸೆಸ್ ಏರಿಕೆ,
*ಸಿಸಿಟಿವಿಗಳ ದರ ಮತ್ತು ರಕ್ಷಣಾ ಸಾಮಗ್ರಿ , ಟೈಲ್ಸ್ , ಫರ್ನಿಚರ್ಸ್ ಬೆಲೆ ಏರಿಕೆ
*ಆಟೋಮೊಬೈಲ್ ಸಾಮಗ್ರಿಗಳ ಬೆಲೆ ಏರಿಕೆ
*ತೆರಿಗೆ ವಿನಾಯಿತಿ ಮೂರೂವರೆ ಲಕ್ಷಕ್ಕೆ ಏರಿಕೆ
*ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆ
* ಮದ್ಯ, ಸಿಗರೇಟ್ ಏರಿಕೆ
*ಮೊಬೈಲ್, ಟಿವಿ, ಫ್ರಿಜ್ಡ್ ಬೆಲೆ ಏರಿಕೆ
ಇಳಿಕೆ:
*ತೆರಿಗೆ ಪಾವತಿಯಲ್ಲಿ ಮೂರುವರೆ ಲಕ್ಷ ರೂ. ಇಳಿಕೆ
*ಆನ್ ಲೈನ್ ವಹಿವಾಟು, ಗೃಹಸಾಲ, ಡಿಜಿಟಲ್ ಪಾವತಿ ಇಳಿಕೆ
*ಪಾಮ್ ಆಯಿಲ್, ಫ್ಯಾಟಿ ಆಯಿಲ್, ಪೇಪರ್ ಇಳಿಕೆ
*ಕೃತಕ ಕಿಡ್ನಿ ಶಸ್ತ್ರ ಚಿಕಿತ್ಸೆ ಉಪಕರಣ ಡಯಾಲಿಸಿಸ್ ಯಂತ್ರದ ದರ ಇಳಿಕೆ