ನವದೆಹಲಿ : ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂವಹನ ಕ್ರಾಂತಿ ಬಳಿಕ ಚುನಾವಣೆಗಳು ಪರಿವರ್ತನೆಯಾಗಿದೆ. ಚುನಾವಣೆಗಳು ಅಧ್ಯಕ್ಷೀಯ ಮಾದರಿಯಾಗಿ ಪರಿವರ್ತನೆಯಾಗಿದೆ. ಬಿಹಾರದಲ್ಲಿ ದೀರ್ಘಕಾಲದಿಂದ ಪರ್ಯಾಯವೇ ಆಗಿಲ್ಲ. ಕಾಂಗ್ರೆಸ್ ಪಕ್ಷ ಪರಿಣಾಮಕಾರಿ ಪರ್ಯಾಯವೇ ಆಗಿಲ್ಲ. ಉತ್ತರಪ್ರದೇಶದಲ್ಲಿ 25ಕ್ಕೂ ಹೆಚ್ಚು ವರ್ಷಗಳಿಂದ ಆಗಿಲ್ಲ. ಯುಪಿಯಲ್ಲಿ ಕಾಂಗ್ರೆಸ್ ಪಕ್ಷ ಪರ್ಯಾಯ ಪಕ್ಷವೇ ಆಗಿಲ್ಲ. ನಾಮಕರಣಗೊಂಡ ಸಿಡಬ್ಯ್ಲುಸಿ ಸದಸ್ಯರಿಂದ ಪ್ರಶ್ನೆ ನಿರೀಕ್ಷೆಯಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಲು ಸಾಧ್ಯವಿಲ್ಲ. 6 ವರ್ಷಗಳಲ್ಲಿ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಂಡಿಲ್ಲ. ಈಗ ಆತ್ಮಾವಲೋಕನದ ಭರವಸೆ ಇಡಲು ಹೇಗೆ ಸಾಧ್ಯ? ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದೇವೆ. ಬೇರೆಯವರಂತೆ ನಾವು ಕೂಡ ನಿಷ್ಠೆ ಇರುವ ಕಾಂಗ್ರೆಸ್ ನವರು. ಕಾಂಗ್ರೆಸ್ ನವರ ನಿಷ್ಠೆಯನ್ನು ಅನುಮಾನಿಸಬಾರದು. ನಾವು ಬೇರೆಯವರ ನಿಷ್ಠೆಯನ್ನು ಅನುಮಾನಿಸುವುದಿಲ್ಲ. ಸೋಲಿನ ಬಗ್ಗೆ ಹೈಕಮಾಂಡ್ ನಿಲುವು ನಾವು ಕೇಳಬೇಕು ಎಂದು ಅವರು ಹೇಳಿದ್ದಾರೆ.