Webdunia - Bharat's app for daily news and videos

Install App

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಗೆ ಎಂತಹ ಶಿಕ್ಷೆ ನೀಡಿದ್ರೂ ಗೊತ್ತಾ?

Webdunia
ಮಂಗಳವಾರ, 14 ನವೆಂಬರ್ 2023 (11:28 IST)
ಬೇರೆ ಕೋಮಿನ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವತಿಗೆ ಸಾಮೂಹಿಕ ಅತ್ಯಾಚಾರದ ಶಿಕ್ಷೆ ನೀಡಬೇಕೆಂದು ಗ್ರಾಮದ ನ್ಯಾಯಾಲಯ ಆದೇಶ ನೀಡಿತ್ತು.  20 ವರ್ಷ ವಯಸ್ಸಿನ ಯುವತಿಯನ್ನು ಮತ್ತು ಅವಳ ಜೊತೆಯಿದ್ದ ಪುರುಷನನ್ನು ಮರಕ್ಕೆ ಕಟ್ಟಿಹಾಕಿ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ತಲಾ 25,000 ದಂಡ ಕಟ್ಟುವಂತೆ ಗ್ರಾಮದ ಹಿರಿಯರು ಆದೇಶ ನೀಡಿದರು. 

ಇದೀಗ ಗ್ರಾಮದ ಬುಡಕಟ್ಟು ಯುವತಿಯೊಬ್ಬಳ ಮೇಲೆ ಅಮಾನುಷವಾಗಿ ನಡೆದ ಗ್ಯಾಂಗ್‌ ರೇಪ್‌ಗೆ ಸಂಬಂಧಿಸಿದಂತೆ  ಕೋರ್ಟೊಂದು ಆರೋಪಿಗಳಿಗೆ 20 ವರ್ಷಗಳ ಸೆರೆವಾಸ ಶಿಕ್ಷೆಯನ್ನು ವಿಧಿಸಿದೆ. 
 
ಆಗ ಮಹಿಳೆಯ ಕುಟುಂಬ ತಮಗೆ ಅಷ್ಟೊಂದು ದಂಡ ಕಟ್ಟಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿತು.ಆಗ ಯುವತಿಯನ್ನು ಬಲವಂತವಾಗಿ ಸಣ್ಣ ಗುಡಿಸಿಲಿನೊಳಕ್ಕೆ ತಳ್ಳಿದರು ಮತ್ತು ಅಲ್ಲಿ ಸುಮಾರು 10 ಜನರು ಯುವತಿಯ ಮೇಲೆ ಮನ ಬಂದಂತೆ ಅತ್ಯಾಚಾರ ನಡೆಸಿದರು.ನನ್ನನ್ನು ಗ್ರಾಮದ ಪುರುಷರು ಅನುಭವಿಸಬೇಕೆಂದು ಗ್ರಾಮದ ಮುಖಂಡ ಆದೇಶ ನೀಡಿದ ಬಳಿಕ ಕನಿಷ್ಟ 10-12 ಮಂದಿ ನನ್ನ ಮೇಲೆ ಸತತವಾಗಿ ಅತ್ಯಾಚಾರ ಮಾಡಿದರು. ನನ್ನ ಮೇಲೆ ಎಷ್ಟು ಬಾರಿ ಅತ್ಯಾಚಾರ ಮಾಡಿದರೆಂದು ಲೆಕ್ಕವೂ ತಪ್ಪಿಹೋಯಿತು ಎಂದು ಯುವತಿ ಪೊಲೀಸರಿಗೆ ದೂರಿದ್ದಾಳೆ.
 
ಪ್ರಥಮ ಮಾಹಿತಿ ವರದಿಯಲ್ಲಿ ಅವಳು 13 ಜನರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಹೆಸರಿಸಿದ್ದಳು.  ಈ ಆಘಾತಕಾರಿ ಪ್ರಕರಣವನ್ನು ಅತ್ಯಂತ ಖಂಡನೀಯ ಎಂದು ಹೇಳಿದ ಕೋರ್ಟ್, ಯುವತಿ ವಾಸಿಸುವ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಂಶಗಳ ಬಗ್ಗೆ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಧೀಶರಿಗೆ ತಿಳಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments