ಬೇರೆ ಕೋಮಿನ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಯುವತಿಗೆ ಸಾಮೂಹಿಕ ಅತ್ಯಾಚಾರದ ಶಿಕ್ಷೆ ನೀಡಬೇಕೆಂದು ಗ್ರಾಮದ ನ್ಯಾಯಾಲಯ ಆದೇಶ ನೀಡಿತ್ತು. 20 ವರ್ಷ ವಯಸ್ಸಿನ ಯುವತಿಯನ್ನು ಮತ್ತು ಅವಳ ಜೊತೆಯಿದ್ದ ಪುರುಷನನ್ನು ಮರಕ್ಕೆ ಕಟ್ಟಿಹಾಕಿ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ತಲಾ 25,000 ದಂಡ ಕಟ್ಟುವಂತೆ ಗ್ರಾಮದ ಹಿರಿಯರು ಆದೇಶ ನೀಡಿದರು.
ಇದೀಗ ಗ್ರಾಮದ ಬುಡಕಟ್ಟು ಯುವತಿಯೊಬ್ಬಳ ಮೇಲೆ ಅಮಾನುಷವಾಗಿ ನಡೆದ ಗ್ಯಾಂಗ್ ರೇಪ್‌ಗೆ ಸಂಬಂಧಿಸಿದಂತೆ ಕೋರ್ಟೊಂದು ಆರೋಪಿಗಳಿಗೆ 20 ವರ್ಷಗಳ ಸೆರೆವಾಸ ಶಿಕ್ಷೆಯನ್ನು ವಿಧಿಸಿದೆ.
ಆಗ ಮಹಿಳೆಯ ಕುಟುಂಬ ತಮಗೆ ಅಷ್ಟೊಂದು ದಂಡ ಕಟ್ಟಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿತು.ಆಗ ಯುವತಿಯನ್ನು ಬಲವಂತವಾಗಿ ಸಣ್ಣ ಗುಡಿಸಿಲಿನೊಳಕ್ಕೆ ತಳ್ಳಿದರು ಮತ್ತು ಅಲ್ಲಿ ಸುಮಾರು 10 ಜನರು ಯುವತಿಯ ಮೇಲೆ ಮನ ಬಂದಂತೆ ಅತ್ಯಾಚಾರ ನಡೆಸಿದರು.ನನ್ನನ್ನು ಗ್ರಾಮದ ಪುರುಷರು ಅನುಭವಿಸಬೇಕೆಂದು ಗ್ರಾಮದ ಮುಖಂಡ ಆದೇಶ ನೀಡಿದ ಬಳಿಕ ಕನಿಷ್ಟ 10-12 ಮಂದಿ ನನ್ನ ಮೇಲೆ ಸತತವಾಗಿ ಅತ್ಯಾಚಾರ ಮಾಡಿದರು. ನನ್ನ ಮೇಲೆ ಎಷ್ಟು ಬಾರಿ ಅತ್ಯಾಚಾರ ಮಾಡಿದರೆಂದು ಲೆಕ್ಕವೂ ತಪ್ಪಿಹೋಯಿತು ಎಂದು ಯುವತಿ ಪೊಲೀಸರಿಗೆ ದೂರಿದ್ದಾಳೆ.
ಪ್ರಥಮ ಮಾಹಿತಿ ವರದಿಯಲ್ಲಿ ಅವಳು 13 ಜನರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಹೆಸರಿಸಿದ್ದಳು. ಈ ಆಘಾತಕಾರಿ ಪ್ರಕರಣವನ್ನು ಅತ್ಯಂತ ಖಂಡನೀಯ ಎಂದು ಹೇಳಿದ ಕೋರ್ಟ್, ಯುವತಿ ವಾಸಿಸುವ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಂಶಗಳ ಬಗ್ಗೆ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಜಿಲ್ಲಾ ನ್ಯಾಯಾಧೀಶರಿಗೆ ತಿಳಿಸಿದ್ದಾರೆ.