ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಕೊನೆಗೂ 50 ದಿನಗಳ ನಂತರ ಡಿಕೆ ಶಿವಕುಮಾರ್ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಈಗ ಅವರು ಜೈಲಿನಿಂದ ಹೊರಗೆ ಬಂದಿದ್ದಾರೆ.
ನಿನ್ನೆ ರಾತ್ರಿ ಸರಿ ಸುಮಾರು 9.30ಕ್ಕೆ ಜೈಲಿನಿಂದ ಡಿಕೆ ಶಿವಕುಮಾರ್ ಅವರು ಹೊರಗೆ ಬಂದಿದ್ದು, ಅವರಿಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು ಅವರನ್ನು ನೋಡಿದ ತಕ್ಷಣ ಅವರ ಸಂಭ್ರಮ ಮುಗಿಲು ಮುಟ್ಟಿದೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಜಾಮೀನು ನೀಡಿದ ಕೋರ್ಟ್ ಗೆ ನಮಸ್ಕಾರ. ತನಗಾಗಿ ರಸ್ತೆಗಿಳಿದು ಹೋರಾಟ ಮಾಡಿದ ಕಾರ್ಯಕರ್ತರು, ಅಭಿಮಾನಿ, ನಾಯಕರುಗಳಿಗೆ ಧನ್ಯವಾದಗಳು. ತನ್ನ ಪರ ವಾದ ಮಂಡಿಸಿದ ವಕೀಲರಿಗೂ ಧನ್ಯವಾದ ತಿಳಿಸಿದ್ದಾರೆ.