ನವದೆಹಲಿ : ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ, ಅಪೇಕ್ಷರ್ಹ ಫೋಟೋವನ್ನು ಟ್ವೀಟ್ ಮಾಡಿದ್ದಕ್ಕೆ ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಈ ಬಗ್ಗೆ ಇದೀಗ ರಮ್ಯಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ವಿರುದ್ದ ದಾಖಲಾಗಿರುವ ದೂರಿಗೆ ಸಂಬಂಧಪಟ್ಟಂತೆ ರಮ್ಯ ಅವರು ಟ್ವಿಟ್ ಮಾಡಿ, ‘ನಿಮ್ಮ ಬೆಂಬಲವನ್ನು ಮತ್ತಷ್ಟು ಹೆಚ್ಚಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಹಾಗೆಯೇ ಯಾರು ನನ್ನ ಟ್ವೀಟ್‍ಗಳನ್ನು ಇಷ್ಟ ಪಡುವುದಿಲ್ಲವೋ ಅವರಿಗೆ ನಾನೇನೂ ಹೇಳೋದಿಕ್ಕೆ ಆಗಲ್ಲ. ಇನ್ನು ಮುಂದಕ್ಕೆ ಇದನ್ನು ಮತ್ತಷ್ಟೂ ಕ್ಲಾಸಿಯಾಗಿ ತೆಗೆದುಕೊಳ್ಳೋಣ’ ಎಂದಿದ್ದಾರೆ.
‘ಕಾನೂನಿನಿಗೆ ಸಂಬಂಧಿಸಿದಂತೆ ಭಾರತ ದ್ರೋಹ ಮಾಡುತ್ತಿದೆ. ಇದು ಬಹಳ ಪುರಾತನವಾಗಿದ್ದು, ದುರ್ಬಳಕೆಯಾಗುತ್ತಿದೆ’ ಅಂತ ತನ್ನ ವಿರುದ್ಧ ಎಫ್‍ಐಆರ್ ಹಾಕಿರೋರಿಗೆ ರಮ್ಯಾ ಟಾಂಗ್ ನೀಡಿ ಟ್ವಿಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.