ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣವಾದ 'ವಾಟ್ಸ್ ಆ್ಯಪ್' ಬಳಕೆದಾರರ ಸುರಕ್ಷತೆಗಾಗಿ ಇದೀಗ 'ಫಿಂಗರ್ ಪ್ರಿಂಟ್' ಫೀಚರ್ ಅನ್ನು ಪರಿಚಯ ಮಾಡಿದೆ.
ವಾಟ್ಸ್ಆಯಪ್ ಬಿಡುಗಡೆ ಮಾಡಿದ 'ಫಿಂಗರ್ ಪ್ರಿಂಟ್' ಫೀಚರ್ ಆಯಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್ ಫೋನ್ಗಳಿಗೆ ಲಭ್ಯವಿದೆ. ಆಯಂಡ್ರಾಯ್ಡ್ ಬಳಕೆದಾರರು ವಾಟ್ಸ್ ಆಯಪ್ 2.19.221ಗೆ ಅಪ್ಡೇಟ್ ಮಾಡುವ ಮೂಲಕ ನೂತನ 'ಫಿಂಗರ್ ಪ್ರಿಂಟ್' ಫೀಚರ್ ಸಿಗಲಿದೆ.
ಈ ನೂತನ ಫೀಚರ್ ವಿದೇಶಿಗರಿಗೆ ಲಭ್ಯವಾಗಿದ್ದು, ಸದ್ಯದಲ್ಲೇ ಭಾರತದಲ್ಲಿ ವಾಟ್ಸ್ ಆಯಪ್ ಬಳಕೆದಾರಿಗೆ ದೊರಕಲಿದೆ ಎನ್ನಲಾಗಿದೆ. ಮೊದಲಿಗೆ ವಾಟ್ಸ್ ಆಯಪ್ 2.19.221ಗೆ ಅಪ್ಡೇಟ್ ಮಾಡಿಕೊಳ್ಳಿ. ನಂತರ ವಾಟ್ಸ್ ಆಯಪ್ ತೆರೆದು ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಕೌಂಟ್ ಸೆಕ್ಷನ್ನಲ್ಲಿರುವ ಪ್ರೈವಸಿ ಸೆಟ್ಟಿಂಗ್ಸ್ ಆಯ್ಕೆಯನ್ನು ಓಪನ್ ಮಾಡಿ. ಅಲ್ಲಿರುವ 'ಫಿಂಗರ್ ಪ್ರಿಂಟ್' ಆಯ್ಕೆಯನ್ನು ವಾಟ್ಸ್ ಆಯಪ್ ಗೆ ಅಳವಡಿಸಿಕೊಳ್ಳಿ.