Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

'ವಾಟ್ಸ್​ ಆ್ಯಪ್'​ ಗೆ 'ಫಿಂಗರ್​ ಪ್ರಿಂಟ್'​ ಆಯ್ಕೆಯನ್ನು ಅಳವಡಿಸಿಕೊಳ್ಳುವುದು ಹೇಗೆ ಗೊತ್ತಾ?

'ವಾಟ್ಸ್​ ಆ್ಯಪ್'​ ಗೆ 'ಫಿಂಗರ್​ ಪ್ರಿಂಟ್'​ ಆಯ್ಕೆಯನ್ನು ಅಳವಡಿಸಿಕೊಳ್ಳುವುದು ಹೇಗೆ ಗೊತ್ತಾ?
ನವದೆಹಲಿ , ಸೋಮವಾರ, 16 ಸೆಪ್ಟಂಬರ್ 2019 (08:18 IST)
ನವದೆಹಲಿ : ಜನಪ್ರಿಯ ಸಾಮಾಜಿಕ ಜಾಲತಾಣವಾದ 'ವಾಟ್ಸ್​ ಆ್ಯಪ್'​ ಬಳಕೆದಾರರ ಸುರಕ್ಷತೆಗಾಗಿ ಇದೀಗ 'ಫಿಂಗರ್​ ಪ್ರಿಂಟ್'​​ ಫೀಚರ್​ ಅನ್ನು ಪರಿಚಯ ಮಾಡಿದೆ.




ವಾಟ್ಸ್​ಆಯಪ್​​​ ಬಿಡುಗಡೆ ಮಾಡಿದ 'ಫಿಂಗರ್​ ಪ್ರಿಂಟ್'​ ಫೀಚರ್​ ಆಯಂಡ್ರಾಯ್ಡ್​ ಮತ್ತು ಐಒಎಸ್​ ಸ್ಮಾರ್ಟ್​ ಫೋನ್​ಗಳಿಗೆ ಲಭ್ಯವಿದೆ. ಆಯಂಡ್ರಾಯ್ಡ್​ ಬಳಕೆದಾರರು ವಾಟ್ಸ್​ ಆಯಪ್​ 2.19.221ಗೆ ಅಪ್ಡೇಟ್​ ಮಾಡುವ ಮೂಲಕ ನೂತನ 'ಫಿಂಗರ್​ ಪ್ರಿಂಟ್​' ಫೀಚರ್​ ಸಿಗಲಿದೆ.


ಈ ನೂತನ ಫೀಚರ್​ ವಿದೇಶಿಗರಿಗೆ ಲಭ್ಯವಾಗಿದ್ದು, ಸದ್ಯದಲ್ಲೇ ಭಾರತದಲ್ಲಿ ವಾಟ್ಸ್ ​ಆಯಪ್​ ಬಳಕೆದಾರಿಗೆ ದೊರಕಲಿದೆ ಎನ್ನಲಾಗಿದೆ. ಮೊದಲಿಗೆ ವಾಟ್ಸ್ ​ಆಯಪ್ 2.19.221ಗೆ ಅಪ್ಡೇಟ್​ ಮಾಡಿಕೊಳ್ಳಿ.  ನಂತರ ವಾಟ್ಸ್ ​ಆಯಪ್​ ತೆರೆದು ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ​. ಅಕೌಂಟ್​ ಸೆಕ್ಷನ್​ನಲ್ಲಿರುವ ಪ್ರೈವಸಿ ಸೆಟ್ಟಿಂಗ್ಸ್​​ ಆಯ್ಕೆಯನ್ನು ಓಪನ್ ಮಾಡಿ. ಅಲ್ಲಿರುವ 'ಫಿಂಗರ್​ ಪ್ರಿಂಟ್'​ ಆಯ್ಕೆಯನ್ನು ವಾಟ್ಸ್​ ಆಯಪ್ ​ಗೆ ಅಳವಡಿಸಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಜನ್ಮದಿನಕ್ಕೆ ಸಾಲು ಮರದ ತಿಮ್ಮಕ್ಕ ಮಾಡಿದ್ದು ಈ ಕೆಲಸ