Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದಾದ್ಯಂತ ರಕ್ಷಾ ಬಂಧನವನ್ನು ಹೇಗೆ ಆಚರಣೆ ಮಾಡಲಾಗುತ್ತದೆ ಗೊತ್ತಾ?

ಭಾರತದಾದ್ಯಂತ ರಕ್ಷಾ ಬಂಧನವನ್ನು ಹೇಗೆ ಆಚರಣೆ ಮಾಡಲಾಗುತ್ತದೆ ಗೊತ್ತಾ?
ಬೆಂಗಳೂರು , ಭಾನುವಾರ, 22 ಆಗಸ್ಟ್ 2021 (11:50 IST)
Raksha Bandhan: ರಕ್ಷಾ ಬಂಧನವನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಆಚರಿಸುವುದಿಲ್ಲ. ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ರಾಖಿ ಪೂರ್ಣಿಮೆಯನ್ನು ಅವನಿ ಅವಿಟ್ಟಂ ಎಂದು ಹೇಳಲಾಗುತ್ತದೆ.

ಭಾರತದಲ್ಲಿ, ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಸಾಂಸ್ಕೃತಿಕ ಇತಿಹಾಸ ಮತ್ತು ಮಹತ್ವವಿದೆ. ಅದೇ ಹಬ್ಬವನ್ನು ದೇಶಾದ್ಯಂತ ವಿವಿಧ ಪದ್ಧತಿಗಳೊಂದಿಗೆ ಆಚರಿಸಲಾಗುತ್ತದೆ. ರಕ್ಷಾ ಬಂಧನವೂ ಇದಕ್ಕೆ ಹೊರತಾಗಿಲ್ಲ. ಮುಖ್ಯವಾಗಿ ಸಹೋದರ-ಸಹೋದರಿಯರ ಸಂಬಂಧವನ್ನು ಬಲಪಡಿಸುವುದು ಈ ಆಚರಣೆಯ ಹಿಂದಿನ ಕಾರಣ. ದೇಶದ ಹೆಚ್ಚಿನ ಭಾಗಗಳಲ್ಲಿ, ಈ ಹಬ್ಬವನ್ನು ಸಹೋದರಿಯು ತನ್ನ ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ಸಂಭ್ರಮದಿಂದ ಆಚರಿಸುತ್ತಾರೆ.ಆದರೆ , ಹಬ್ಬವನ್ನು ಸಹ ದೇಶದ ಇತರ ಭಾಗಗಳಲ್ಲಿ ವಿವಿಧ ರೀತಿಲ್ಲಿ ಆಚರಣೆ ಮಾಡಲಾಗುತ್ತದೆ.
ತಮಿಳುನಾಡು, ಕೇರಳ, ಮಹಾರಾಷ್ಟ್ರದಲ್ಲಿ ಹೇಗೆ ಆಚರಿಸಲಾಗುತ್ತದೆ?
ರಕ್ಷಾ ಬಂಧನವನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ ಆಚರಿಸುವುದಿಲ್ಲ. ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ರಾಖಿ ಪೂರ್ಣಿಮೆಯನ್ನು ಅವನಿ ಅವಿಟ್ಟಂ ಎಂದು ಹೇಳಲಾಗುತ್ತದೆ.ಈ ಹಬ್ಬವು ಕುಟುಂಬದ ಪುರುಷರು ಮಾತ್ರ ಆಚರಿಸುತ್ತಾರೆ. ಶ್ರಾವಣ ಮಾಸದ ಹುಣ್ಣಿಮೆಯ ರಾತ್ರಿ, ಜನರು ನೀರಿನಲ್ಲಿ ಸ್ನಾನ ಮಾಡುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆಯನ್ನು ಮಾಡುವಾಗ, ಅವರು ತಮ್ಮ ಹಿಂದಿನ ಪಾಪಗಳಿಗೆ ದೇವರು ಪ್ರಾಯಶ್ಚಿತ್ತ ನೀಡಲಿ ಎಂದು ಬಯಸುತ್ತಾರೆ. ಆಚರಣೆಯ ನಂತರ ಪವಿತ್ರ ದಾರ ಅಥವಾ ಜನಿವಾರವನ್ನು ದೇಹಕ್ಕೆ ಕಟ್ಟಲಾಗುತ್ತದೆ. ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಈ ಹಬ್ಬವನ್ನು ಹೀಗೆಯೇ ಆಚರಣೆ ಮಾಡಲಾಗುತ್ತದೆ.
ಈ ಹಬ್ಬದ ದಿನ ಹಳೆಯ ದಾರವನ್ನು ತೆಗದು ಹೊಸ ದಾರದೊಂದಿಗೆ ಬದಲಾಯಿಸಲಾಗುತ್ತದೆ. ಹೊಸ ದಾರವನ್ನು ಕಟ್ಟುವಾಗ, ಅವರು ಮುಂಬರುವ ವರ್ಷದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವ ಭರವಸೆ ನೀಡುತ್ತಾರೆ. ವಿದ್ವಾಂಸರು ಈ ದಿನದಂದು ಯಜುರ್ ವೇದವನ್ನು ಓದಲು ಪ್ರಾರಂಭಿಸುತ್ತಾರೆ. ಹಾಗೆಯೇ ಈ ಪಠಣವನ್ನು ಮುಂದಿನ 6 ತಿಂಗಳುಗಳವರೆಗೆ ನಡೆಸಲಾಗುತ್ತದೆ. ಇನ್ನು ತಮಿಳುನಾಡಿನಲ್ಲಿ, ಪೊಂಗಲ್ ಹಬ್ಬದ ನಾಲ್ಕನೇ ದಿನವನ್ನು ಕಾನುಂ ಅಥವಾ ಕಾನು ಪೊಂಗಲ್ ಎಂದು ಕರೆಯಲಾಗುತ್ತದೆ. ಈ ದಿನ, ಮಹಿಳೆಯರು ತಮ್ಮ ಸಹೋದರರ ಹೆಸರಿನಲ್ಲಿ ಕಾನು ಪಿಡಿ ಎಂಬ ಆಚರಣೆಯನ್ನು ಮಾಡುತ್ತಾರೆ.
ಕರ್ನಾಟಕದ ಜನರು ನಾಗ ಪಂಚಮಿಯಂದು ಅಣ್ಣನ ಪೂಜೆ ಮಾಡಿ, ಸುಖ ಶಾಂತಿಗಾಗಿ ಬೇಡುತ್ತಾರೆ. ಹಾಗೆಯೇ ರಕ್ಷಾ ಬಂಧನದ ದಿನ ಕೂಡ ರಾಖಿಯನ್ನು ಸಹೋದರನಿಗೆ ಕಟ್ಟುತ್ತಾರೆ. ತೆಲುಗು ಮಾತನಾಡುವ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣದಲ್ಲಿ ರಾಖಿಯನ್ನು ರಾಖಿ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಇದನ್ನು ಅನೇಕ ಕುಟುಂಬಗಳಲ್ಲಿ, ತಮ್ಮ ತಂದೆಗೆ ಹೆಣ್ಣು ಮಕ್ಕಳು ರಾಖಿ ಕಟ್ಟುವ ವಿಶೇಷ ಸಂಪ್ರದಾಯವನ್ನು ಹೊಂದಿದ್ದಾರೆ. ಈ ರಾಜ್ಯಗಳಲ್ಲಿ ಮಾತ್ರ ರಾಖಿ ಹುಣ್ಣಿಮೆಯನ್ನು ಹೆಚ್ಚು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ.
ರಕ್ಷಾ ಬಂಧನವನ್ನು ಮಹಾರಾಷ್ಟ್ರ ಮತ್ತು ಇತರ ಕರಾವಳಿ ಪ್ರದೇಶಗಳಲ್ಲಿ ನರಳಿ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಈ ದಿನ, ಸಮುದ್ರ ದೇವರನ್ನು ಪೂಜೆ ಮಾಡಲಾಗುತ್ತದೆ. ಅಲ್ಲದೆ ಮೀನುಗಾರರು ಪೂಜೆಯ ನೈವೇದ್ಯವಾಗಿ ತೆಂಗಿನಕಾಯಿಗಳನ್ನು ಸಮುದ್ರಕ್ಕೆ ಎಸೆದು ಪ್ರಾರ್ಥನೆ ಮಾಡುತ್ತಾರೆ.
ರಕ್ಷಾ ಬಂಧನದ ದಿನದಂದು ಹಲವು ರಾಜ್ಯಗಳು ಇತರ ಅನೇಕ ಹಬ್ಬಗಳನ್ನು ಆಚರಣೆ ಮಾಡುವ ಪದ್ಧತಿ ಇದೆ.
ಮಧ್ಯ ಪ್ರದೇಶ ಮತ್ತು ಬಿಹಾರದಲ್ಲಿ ಈ ಹಬ್ಬವನ್ನು ಕೃಷಿಯ ಕೆಲಸಗಳನ್ನು ಆರಂಭ ಮಾಡುವ ದಿನ ಎಂದು ಆಚರಿಸಲಾಗುತ್ತದೆ. ಇದನ್ನು ಕಾಜಾರಿ ಪೂರ್ಣಿಮಾ ಎಂದು ಕರೆಯಲಾಗುತ್ತದೆ.
ಪಶ್ಚಿಮ ಬಂಗಾಳದಲ್ಲಿ ಕೃಷ್ಣ ಮತ್ತು ರಾಧೆಗೆ ಸಮರ್ಪಿತವಾದ ಜುಲನ್ ಪೂರ್ಣಿಮಾ ಎಂದು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಉತ್ತರಾಖಂಡದಲ್ಲಿ ಇದನ್ನು ಜಂಧ್ಯಂ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ.
ಒಡಿಶಾದಲ್ಲಿ, ಹಸುಗಳು ಮತ್ತು ಎಮ್ಮೆಗಳನ್ನು ಈ ದಿನದಂದು ಪೂಜಿಸಲಾಗುತ್ತದೆ, ಇದನ್ನು ಗಮ್ಹ ಪೂರ್ಣಿಮಾ ಎಂದು ಆಚರಣೆ ಮಾಡಲಾಗುತ್ತದೆ. ಗುಜರಾತಿನ ಕೆಲವು ಭಾಗಗಳಲ್ಲಿ, ಪವಿತ್ರೋಪನ ಎಂದು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಮತ್ತು ಈ ದಿನ ಶಿವನ ಆರಾಧನೆ ಮಾಡುತ್ತಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ವರುಣನ ಅಬ್ಬರ; ಇನ್ನೂ 2 ದಿನ ಧಾರಾಕಾರ ಮಳೆ