ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಟ್ವೀಟರ್ ಖಾತೆಯಲ್ಲಿರುವ ಅಭಿಮಾನಿಗಳಲ್ಲಿ ಶೇ.60ರಷ್ಟು ನಕಲಿ ಎಂದು ವರದಿಯೊಂದು ಹೇಳಿದೆ.
ಅಂತರಾಷ್ಟ್ರೀಯ ಸಂಸ್ಥೆಗಳು ಮತ್ತು ಸರ್ಕಾರಗಳಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ಅವುಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಬಗ್ಗೆ ಸಲಹೆ ನೀಡುವ ಟ್ವಿಪ್ಲೊಮಸಿ ಸಂಸ್ಥೆ ಈ ಬಗ್ಗೆ ಅಧ್ಯಯನ ನಡೆಸಿದ್ದು, ಅದರ ಪ್ರಕಾರ ಪ್ರಧಾನಿ ಮೋದಿಯ ಟ್ವೀಟರ್ ಖಾತೆಯ 4,09,93,053 ಅನುಯಾಯಿಗಳಲ್ಲಿ 2,47,99,527ಮಂದ ನಕಲಿ ಅನುಯಾಯಿಗಳಾಗಿದ್ದು, 16,191,426 ಖಾತೆಗಳು ಮಾತ್ರ ಅಧಿಕೃತ ಎಂದು ಹೇಳಿದೆ.
ಅಷ್ಟೇ ಅಲ್ಲದೇ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾತೆಯಲ್ಲಿ ಶೇ.37ರಷ್ಟು ನಕಲಿ ಅನುಯಾಯಿಗಳಿದ್ದು, ಪೋಪ್ ಫ್ರಾನ್ಸಿಸ್ ಅವರ ಖಾತೆಯಲ್ಲಿ ಶೇ.59 ಮಂದಿ ನಕಲಿ ಅನುಯಾಯಿಗಳೆಂದು ತಿಳಿಸಿದೆ.