ಕಾಂಗರೂ ಕೋರ್ಟ್ ನೀಡಿದ ಶಿಕ್ಷೆಯನ್ನು ವಿರೋಧಿಸಿದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವುದು ಸ್ಥಳಿಯರಿಗೆ ಗೊತ್ತಿದೆ. ಸ್ಥಳಿಯರು ನ್ಯಾಯಾಲಯದ ತೀರ್ಪಿನ ವಿಳಂಬ ನೀತಿಯಿಂದಾಗಿ ಕಾಂಗರೂ ಕೋರ್ಟ್ ಮೊರೆಹೋಗುತ್ತಾರೆ. ಆದರೆ, ಇಲ್ಲಿ ನೀಡುವ ತೀರ್ಪು ಮಾತ್ರ ಘನಘೋರ. ಇದಕ್ಕೊಂದು ಸಾಕ್ಷಿ ಇಲ್ಲಿದೆ ನೋಡಿ.
ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳಿಗೆ ಗ್ರಾಮದ ಕಾಂಗರೂ ಕೋರ್ಟ್ ಎಂಜಲನ್ನು ನೆಕ್ಕುವಂತೆ ಆದೇಶಿಸಿತು. ತೃಣಮೂಲ ಕಾಂಗ್ರೆಸ್ ನೇತೃತ್ವದ ಮಹಿಳಾ ಕೌನ್ಸಿಲರ್ ನೇತೃತ್ವದಲ್ಲಿ ಈ ಸಭೆ ನಡೆಯಿತು. ಬಾಲಕಿ ಅದಕ್ಕೆ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಬಾಲಕಿಯ ದೇಹ ನಗ್ನಸ್ಥಿತಿಯಲ್ಲಿ ರೈಲ್ವೆ ಹಳಿಗಳ ಬಳಿ ಪತ್ತೆಯಾದ ದಾರುಣ ಘಟನೆ ವರದಿಯಾಯಿತು.
ಬಾಲಕಿಯ ಕುಟುಂಬ ತಮ್ಮ ಪುತ್ರಿಯ ರೇಪ್ ಮತ್ತು ಹತ್ಯೆ ಮಾಡಲಾಗಿದೆ ಎಂದು ಎಫ್‌ಐಆರ್ ದಾಖಲಿಸಿ ಜಲ್‌ಪೈಗುರಿ ಜಿಲ್ಲೆಯ ಜಲಪೈಗುರಿ ಗ್ರಾಮದ 13 ಜನರನ್ನು ಹೆಸರಿಸಿದರು. ಮೂವರನ್ನು ಈ ಸಂಬಂಧ ಪ್ರಶ್ನಿಸಲು ಬಂಧಿಸಲಾಗಿದೆ.
ಕಾಂಗರೂ ಕೋರ್ಟ್‌ನಲ್ಲಿ ಬಾಲಕಿಯ ತಂದೆಗೆ ಥಳಿಸುತ್ತಿದ್ದಾಗ ಬಾಲಕಿ ಪ್ರತಿಭಟಿಸಿದಳು. ಈ ಸಭೆಯನ್ನು ತೃಣಮೂಲ ಕೌನ್ಸಿಲರ್ ನಮಿತಾ ರಾಯ್ ಕರೆದಿದ್ದರು. ವಿದ್ಯುತ್ ಟಿಲ್ಲರ್ ಬಾಡಿಗೆ ಪಡೆದು ಹಣ ಪಾವತಿ ಮಾಡದಿದ್ದರಿಂದ ಬಾಲಕಿಯ ತಂದೆಗೆ ಶಿಕ್ಷೆ ನೀಡಲಾಗಿತ್ತು.
ತನ್ನ ತಂದೆಗೆ ಹೊಡೆಯದಂತೆ ತಡೆಯಲು ಬಾಲಕಿ ಗ್ರಾಮಸ್ಥರಿಗೆ ಪ್ರಚೋದನೆ ಮಾಡಿದಾಗ, ಕಾಂಗರೂ ಕೋರ್ಟ್ ಅವಳತ್ತ ತಿರುಗಿತು. ಸ್ವಲ್ಪ ಹೊತ್ತಿನಲ್ಲೇ ಅವಳು ಆ ಸ್ಥಳದಿಂದ ಕಣ್ಮರೆಯಾಗಿದ್ದಳು. ಅವಳ ದೇಹ ಮರುದಿನ ಬೆಳಿಗ್ಗೆ ಪತ್ತೆಯಾಯಿತು. ಮೃತಳ ದೇಹ ಪತ್ತೆ ಮಾಡಿದ ಗಣೇಶ್ ಪ್ರಸಾದ್ ಎಂಬವರು ರೈಲಿಗೆ ಸಿಕ್ಕಿ ಸತ್ತಿದ್ದರೆ ದೇಹ ಚೂರುಚೂರಾಗುತ್ತಿತ್ತು.
ಈ ಪ್ರಕರಣದಲ್ಲಿ ದೇಹ ನಗ್ನಸ್ಥಿತಿಯಲ್ಲಿದ್ದು ಭುಜ ಮಾತ್ರ ಬಟ್ಟೆಯಿಂದ ಮುಚ್ಚಿತ್ತು ಎಂದು ಹೇಳಿದ್ದಾರೆ. ನನ್ನ ಭಾವನಿಗೆ ಥಳಿಸಿದಾಗ ಅವನ ಪುತ್ರಿ ಪ್ರತಿಭಟಿಸಿದಳು. ಗ್ರಾಮಸ್ಥರು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವಳು ವಿವಸ್ತ್ರಳಾಗಿದ್ದು ಹೇಗೆ? ಅವಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಚಿಕ್ಕಪ್ಪ ದೂರಿದ್ದಾರೆ.