ನವದೆಹಲಿ: ವಾಟ್ಸಪ್ ನಲ್ಲಿ ಇತ್ತೀಚೆಗೆ ಸುಳ್ ಸುದ್ದಿ ಹಬ್ಬಿಸುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಮತ್ತೊಂದು ಸುಳ್ ಸುದ್ದಿ ಹರಿದಾಡುತ್ತದೆ.
ಅದು ಒಂದು ಕರೆಯ ಬಗ್ಗೆ. 777888999 ಎಂಬ ನಂಬರ್ ನಿಂದ ಕರೆ ಬರುತ್ತದೆ. ಬಂದರೆ ಖಂಡಿತಾ ರಿಸೀವ್ ಮಾಡಬೇಡಿ. ಒಂದು ವೇಳೆ ರಿಸೀವ್ ಮಾಡಿದರೆ ನಿಮ್ಮ ಫೋನ್ ಬ್ಲಾಸ್ಟ್ ಆಗೋದು ಖಂಡಿತಾ ಎಂಬ ಸಂದೇಶ ಬರುತ್ತಿದೆ.
ಆದರೆ ಇದರ ಬಗ್ಗೆ ಭಯಪಡಬೇಕಿಲ್ಲ. ಅಂತಹದ್ದೊಂದು ಕರೆ ಬರುವುದೂ ಇಲ್ಲ. ಬಂದರೆ ಅಂತಹ ತೊಂದರೆಯೂ ಇಲ್ಲ. ಇದು 9 ಅಂಕಿಯ ನಂಬರ್. ಭಾರತದಲ್ಲಿ ಒಂಭತ್ತು ಸಂಖ್ಯೆಯ ಮೊಬೈಲ್ ನಂಬರೇ ಇಲ್ಲ. ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ 9 ಅಂಕಿಯ ನಂಬರ್ ಇರುತ್ತದೆ. ಒಂದು ವೇಳೆ ಭಾರತಕ್ಕೆ ಅಂತಹ ರಾಷ್ಟ್ರಗಳಿಂದ ಕರೆ ಬಂದರೂ ಅದರ ಜತೆಗೆ ಆ ರಾಷ್ಟ್ರದ ಕೋಡ್ ಕೂಡಾ ನಮೂದಾಗಿರುತ್ತದೆ. ಹಾಗಾಗಿ ಇಂತಹ ಸಂದೇಶ ಬಂದರೆ ನಿಶ್ಚಿಂತೆಯಿಂದ ಕಡೆಗಣಿಸಿ ಆರಾಮವಾಗಿರಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ