ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಯವರ 93ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಡಿಎಂಕೆ ಕಾರ್ಯಕರ್ತರು ನಗರದಾದ್ಯಂತ ಸಿಹಿ ಹಂಚಿ ಸಂಭ್ರಮಿಸಿದ್ದಲ್ಲದೇ ಡಿಎಂಕೆ ಕಾರ್ಯಕರ್ತರಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು.
ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ, ಡಿಎಂಕೆ ಸಂಸ್ಥಾಪಕ ಸಿ.ಎನ್.ಅಣ್ಣಾದೊರೈ ಮತ್ತು ಇ.ವಿ.ರಾಮಾಸ್ವಾಮಿ ಪೆರಿಯಾರ್ ಸ್ಮಾರಕಗಳಿಗೆ ಹೂಗುಚ್ಚ ಅರ್ಪಿಸಿದರು.
ನಗರದ ಸಿಐಟಿ ಕಾಲೋನಿಯಲ್ಲಿರುವ ನಿವಾಸದಲ್ಲಿ ಪುತ್ರ ಎಂ.ಕೆ. ಸ್ಟಾಲಿನ್ ಸೇರಿದಂತೆ ಕುಟುಂಬದವರ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದರು.
ಪುತ್ರಿ ರಾಜ್ಯಸಭೆ ಸದಸ್ಯೆ ಕನಿಮೋಳಿ ಕೂಡಾ ತಂದೆಗೆ ಶುಭಕೋರಿದರು. ಡಿಎಂಕೆ ಪಕ್ಷದ ಹಿರಿಯ ನಾಯಕರಾದ ದೊರೈಮುರುಘನ್ ಮತ್ತು ಟಿ.ಆರ್ ಬಾಲು ಕರುಣಾನಿಧಿ ನಿವಾಸಕ್ಕೆ ತೆರಳಿ ಶುಭಕೋರಿದರು.
ನಗರದ ವೈಎಂಸಿಎ ಕ್ರೀಡಾಂಗಣದಲ್ಲಿ ಡಿಎಂಕೆ ಪಕ್ಷದ ವತಿಯಿಂದ ಇಂದು ಸಂಜೆ ಸಾರ್ವಜನಿಕ ಸಭೆ ಆಯೋಜಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.